ವೀಡಿಯೋ: ಮನುಷ್ಯರಂತೆ ಚಾಕು ಹರಿತ ಮಾಡಿದ ಮಂಗ

Public TV
1 Min Read
monkey

ನುಷ್ಯರಂತೆ ಮಂಗವೊಂದು ಚಾಕು ಹರಿತ ಮಾಡುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಾಣಿಗಳು ಮನುಷ್ಯರಂತೆ ವರ್ತಿಸುತ್ತವೆ. ಈ ವರ್ತನೆ ನಮ್ಮಲ್ಲಿ ನಗುವಿನಲೆ ಮೂಡಿಸುವುದು ಸರ್ವೇ ಸಾಮಾನ್ಯ. ಕೋತಿಗಳು ಎಂದಾಕ್ಷಣ ನೆನಪಿಗೆ ಬರುವುದು ಅದರ ಕುಚೇಷ್ಟೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಯುದ್ಧವನ್ನೂ ಗೆಲ್ಲಲಿದೆ: ರಾಜನಾಥ್ ಸಿಂಗ್

RCR Monkey 1

ಹೆಚ್ಚಿನ ಜನರು ಕೋತಿಗಳ ಕುಚೇಷ್ಟೆಗೆ ಒಂದೊದು ಸಲ ಹೆದರುತ್ತಾರೆ. ಇನ್ನೊಮ್ಮೆ ಅದೇ ಕುಚೇಷ್ಟೆ ನಗುವರಳಿಸುತ್ತದೆ. ಅದರಲ್ಲೂ ಕೆಲವೊಮ್ಮೆ ಕೋತಿಗಳು ಥೇಟ್ ಮನುಷ್ಯರನ್ನೇ ಅನುಕರಣೆ ಮಾಡಿ ಅಚ್ಚರಿ ಮೂಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/rupin1992/status/1468835804046786560

ಕೋತಿಯೊಂದು ಚಾಕು ಹರಿತ ಮಾಡುವ ವೀಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ನಾವು ಸಿದ್ಧರಿದ್ದೇವೆ ಎಂಬ ಕ್ಯಾಪ್ಶನ್ ಕೊಡುವುದರ ಮೂಲಕ ಈ ವೀಡಿಯೋ ಅನೇಕ ನೆಟ್ಟಿಗರ ಗಮನ ಸೆಳೆದಿದೆ. ವೀಡಿಯೋ ೪,೦೦೦ಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಕಾಮೆಂಟ್‌ಗಳ ಸುರಿಮಳೆ ಹರಿದು ಬಂದಿದೆ. ಕೆಲವರು ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ ಬರೋಬ್ಬರಿ 10 ಡೋಸ್ ಕೋವಿಡ್ ಲಸಿಕೆ ಪಡೆದ ಭೂಪ!

Share This Article
Leave a Comment

Leave a Reply

Your email address will not be published. Required fields are marked *