ಚೆನ್ನೈ: ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಕಂಡು ಬರುವ ಮುಗ್ದ ಪ್ರಾಣಿಗಳ ವೀಡಿಯೋಗಳು (Animal Video) ಜನರನ್ನು ನಕ್ಕು ನಗಿಸದೇ ಇರಲಾರದು. ಪ್ರಾಣಿಗಳ ಆಟಾಟೋಪಗಳನ್ನು ನೋಡುವುದು ಜನರ ಖಿನ್ನತೆಗೆ ರಾಮಬಾಣವೂ ಹೌದು. ಇಂತಹುದೇ ಒಂದು ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಎಂದಾದರೂ ನೀವು ಜಿಂಕೆಯ (Deer) ಮೇಲೆ ಕೋತಿ (Monkey) ಸವಾರಿ ಮಾಡಿರುವುದನ್ನು ನೋಡಿದ್ದೀರಾ? ಇಲ್ಲ ಎಂದಾದರೆ ಇಲ್ಲೊಂದು ಅಂತಹುದೇ ವೀಡಿಯೋ ವೈರಲ್ ಆಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT Madras) ಕ್ಯಾಂಪಸ್‌ನಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ.
Advertisement
Meanwhile, monkeys in IIT Madras. pic.twitter.com/v1MTQ4J8AJ
— Azhar (@lonelyredcurl) October 10, 2022
Advertisement
ವೀಡಿಯೋದಲ್ಲಿ ಜಿಂಕೆಯೊಂದು ಕ್ಯಾಂಪಸ್‌ನ ಕಟ್ಟಡಗಳ ಸಮೀಪ ಹುಲ್ಲನ್ನು ಮೇಯಲು ಅಡ್ಡಾಡುತ್ತಿದೆ. ಅದರ ಮೇಲೆ ಆರಾಮವಾಗಿ ಕುಳಿತ ಕೋತಿಯೊಂದು ಆ ಗಳಿಗೆಯನ್ನು ಆನಂದಿಸುತ್ತಿದೆ. ತನ್ನ ಮೇಲೆ ಮಂಗ ಸವಾರಿ ಮಾಡುತ್ತಿದ್ದರೂ ಜಿಂಕೆ ಕಿಂಚಿತ್ತೂ ವಿಚಲಿತವಾಗದೇ ಹಾಯಾಗಿ ಓಡಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್
Advertisement
ಇದೀಗ ವೀಡಿಯೋ ಭಾರೀ ವೈರಲ್ ಆಗುತ್ತಿರುವುದು ಮಾತ್ರವಲ್ಲದೇ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಐಐಟಿ ಮದ್ರಾಸ್‌ನಲ್ಲಿ ಮಂಗಗಳು ಹೀಗಿರುತ್ತವೆ ಎಂದು ಕೆಲವರು ಹೇಳಿದರೆ, ಇನ್ನೊಬ್ಬರು, ಮಂಗಗಳು ಮನುಷ್ಯರಂತೆ ಪ್ರಾಣಿಗಳ ಮೇಲೆ ಸವಾರಿ ಮಾಡಲು ಹೇಗೆ ಸಾಧ್ಯ ಎಂದು ಆಶ್ಚರ್ಯಪಟ್ಟಿದ್ದಾರೆ. ಇನ್ನೊಬ್ಬರು ಅದು ಐಐಟಿ ಕ್ಯಾಂಪಸ್‌ನ ಮಂಗ, ಹೀಗಾಗಿ ಇಷ್ಟೊಂದು ಸ್ಮಾರ್ಟ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
Advertisement
ಐಐಟಿ ಮದ್ರಾಸ್ ಕ್ಯಾಂಪಸ್ ಅನ್ನು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದ್ದು, ಅದರ ಹೆಚ್ಚಿನ ಭಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಹೀಗಾಗಿ ಅಲ್ಲಿನ ಕ್ಯಾಂಪಸ್‌ನಲ್ಲಿ ಜಿಂಕೆ, ಕೋತಿ ಸೇರಿದಂತೆ ಅನೇಕ ಜಾತಿಯ ಪ್ರಾಣಿಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿದೆ. ಇದನ್ನೂ ಓದಿ: ಅಪ್ಪು ಗುಣಗಳನ್ನ ಅಳವಡಿಸಿಕೊಳ್ಳಬೇಕು ಎಂದು ಫ್ಯಾನ್ಸ್‌ಗೆ ಉಪ್ಪಿ ಸಂದೇಶ