ಚಿಕ್ಕಬಳ್ಳಾಪುರ: ಅದು ವಿಶ್ವವಿಖ್ಯಾತ ನಂದಿಗಿರಿಧಾಮ (Nandi Hills). ವೀಕೆಂಡ್ ಬಂದ್ರೆ ಸಾಕು ಪ್ರವಾಸಿಗರೇ ದಂಡೇ ನಂದಿಗಿರಿಧಾಮಕ್ಕೆ ಹರಿದು ಬರುತ್ತೆ. ಇಂಥ ಗಿರಿಧಾಮದಲ್ಲಿ ಕೋತಿಗಳ ಉಪಟಳ ಮಿತಿಮೀರಿದ್ದು, ಪ್ರವಾಸಿ (Tourist) ಗರ ಮೇಲೆಯೇ ರೌಡಿಸಂ ಮಾಡ್ತಿವೆ. ಸದ್ಯ ಈ ಕೋತಿಗಳ ಕಾಟಕ್ಕೆ ಪ್ರವಾಸಿಗರು ಹೈರಾಣಾಗಿ ಹೋಗಿದ್ದು, ಮಂಕಿಗಳ ಹಾವಳಿಗೆ ಮುಕ್ತಿ ಕೊಡಿಸಿ ಅಂತಿದ್ದಾರೆ.
Advertisement
ಪ್ರವಾಸಿಗರ ಕೈಯಲ್ಲಿರೋ ಐಸ್ ಕ್ರೀಂ ಕಿತ್ತುಕೊಂಡು ಸವಿತಿರೋ ಕೋತಿಗಳು. ಮತ್ತೊಂದೆಡೆ ಪ್ರವಾಸಿಗರ ಬ್ಯಾಗ್‍ಗೆ ಹೊಂಚು ಹಾಕ್ತಿರೋ ಕೋತಿಗಳು. ಹೀಗೆ ಪ್ರವಾಸಿಗರ ಬೆನ್ನಿಗೆ ಬಿದ್ದು ಕೋತಿಗಳು ಉಪಟಳ ಕೊಡ್ತಿರೋದು ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ. ಹೌದು.. ನಂದಿಬೆಟ್ಟದಲ್ಲಿ ಕೋತಿಗಳದ್ದೇ ರಾಜ್ಯಭಾರ. ಎಲ್ಲೆಲ್ಲೂ ದಂಡು ದಂಡಾಗಿ ಕಾಣೋ ಕೋತಿ (Monkey) ಗಳು ಪ್ರವಾಸಿಗರಿಗೆ ಕೊಡಬಾರದ ಕಾಟ ಕೊಡ್ತಿವೆ. ಪ್ರವಾಸಿಗರು ನಂದಿಬೆಟ್ಟದಲ್ಲೂ ಏನೂ ತಿನ್ನಂಗಿಲ್ಲ. ಏನೇ ತಿಂಡಿ ತಿನಿಸು ಕೈಯಲ್ಲಿದ್ರೂ ಚಂಗನೆ ಎದುರಿಗೆ ಬರೋ ಕೋತಿಗಳು ಬಲವಂತವಾಗಿಯೇ ಕಿತ್ತುಕೊಂಡು ಹೋಗ್ತವೆ.
Advertisement
Advertisement
ಇಷ್ಟಲ್ಲದೇ ಪ್ರವಾಸಿಗರ ಮೇಲೆ ಮುಗಿಬಿಳೋ ಕೋತಿಗಳು ಕೈಯಲ್ಲಿರೋ ಐಸ್ ಕ್ರೀ. ಚಾಕ್ಲೇಟ್, ಬಿಸ್ಕೆಟ್ ಏನೇ ಆಗಲಿ ಬಿಡೋದಿಲ್ಲ. ಕೊಡಲಿಲ್ಲ ಅಂದ್ರೆ ಮೈಮೇಲೆ ಎರಗ್ತವೆ. ಕೈಯಲ್ಲಿ ಕವರ್, ಬ್ಯಾಗ್ ಏನೇ ಇಡ್ಕೊಂಡು ಹೋದ್ರೂ ಅದನ್ನೇ ಹಿಂಬಾಲಿಸ್ತವೆ. ಇದರಿಂದ ಯಾಕಪ್ಪ ಇಲ್ಲಿಗೆ ಬಂದ್ವಿ ಅನ್ನೋ ಬೇಸರ ಪ್ರವಾಸಿಗರಿಗೆ ಮೂಡ್ತಿದೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ದೀಪಾವಳಿ ಸಂಭ್ರಮ- ಎಲ್ಲರನ್ನೂ ಆಕರ್ಷಿಸಿದ ಗೂಡುದೀಪದ ಕಾರ್ಯಕ್ರಮ
Advertisement
ಆದ್ರೆ ಒಂದು ಕಡೆ ಕೋತಿಗಳು ತಿಂಡಿ ತಿನಿಸುಗಳಿಗಾಗಿ ದಾಳಿ ಮಾಡಿದ್ರೆ ಮತ್ತೊಂದೆಡೆ ವಾಹನಗಳ ಮೇಲೂ ಕೋತಿಗಳ ದಾಳಿ ಮಾಡಿ ಮಿರರ್ ಸೀಟು, ಗಾಜು ಸೇರಿ ಬಿಡಿ ಭಾಗಗಳನ್ನ ಹಾಳು ಮಾಡ್ತವೆ. ಇದರಿಂದ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರು ಕೋತಿಗಳ ಉಪಟಳದಿಂದ ಹೈರಾಣಾಗಿ ಹೋಗ್ತಿದ್ದು ಕೋತಿಗಳ ಕಾಟಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿಕೊಳ್ತಿದ್ದಾರೆ.