ರಾಮನಗರ: ವೃದ್ಧೆ ಸಾವಿಗೆ ಕೋತಿಯೊಂದು ಮರುಗಿ, ಮೃತದೇಹದ ಮೇಲೆ ಮಲಗಿ ರೋಧನೆ ವ್ಯಕ್ತಪಡಿಸಿರುವ ವಿಚಿತ್ರ ಘಟನೆ ಜಿಲ್ಲೆಯ ಚನ್ನಪಟ್ಟಣ (Channapatna) ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಎಂಬುವವರ ಸಾವಿಗೆ ಕಪಿರಾಯ ಕಣ್ಣೀರು ಹಾಕಿದ್ದಾನೆ. ಇದನ್ನೂ ಓದಿ: ನಟ ವಿಜಯ್ ವಿರುದ್ಧ ಪ್ರಕರಣ ದಾಖಲು
ನಿತ್ಯ ಮನೆ ಬಳಿ ಬರ್ತಿದ್ದ ಕೋತಿಯನ್ನ ತಿಂಡಿ ಕೊಟ್ಟು ವೃದ್ಧೆ ಪ್ರೀತಿಯಿಂದ ನೋಡಿಕೊಳ್ತಿದ್ರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವೃದ್ಧೆ ಸಾವಿಗೆ ಕೋತಿ ಮೂಕರೋಧನೆ ವ್ಯಕ್ತಪಡಿಸಿದೆ.
ವೃದ್ಧೆ ಮೃತದೇಹದ ಮೇಲೆ ಮಲಗಿ ಕಣ್ಣೀರು ಹಾಕಿದೆ. ಕೋತಿ ಹಾಗೂ ವೃದ್ಧೆ ಬಾಂದವ್ಯ ನೋಡಿ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೂ ಅಜ್ಜಿ ಬದುಕಿದ್ದಾಗ ಕೋತಿ ಜೊತೆ ಆಟವಾಡ್ತಿರೋ ವಿಡಿಯೋ ಹಾಗೂ ಅಜ್ಜಿಯ ಸಾವಿನ ಮುಂದೆ ರೋಧನೆ ವ್ಯಕ್ತಪಡಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ – ಪಕ್ಕದ ರಸ್ತೆಗೆ ಉರುಳಿಬಿದ್ದ ಕಾರು

