ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನವರಾತ್ರಿ ಅಂಗವಾಗಿ ದೇವಿಯ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಂಗವೊಂದು ಪ್ರವಚನ ಕೇಳುತ್ತಿರುವ ಅಪರೂಪದ ದೃಶ್ಯವೊಂದು ಕಂಡುಬಂದಿದೆ.
ಹುಬ್ಬಳ್ಳಿಯ ಕಲ್ಯಾಣ ನಗರದ ರಾಮಕೃಷ್ಣ ಆಶ್ರಮದಲ್ಲಿ ನವರಾತ್ರಿ ಅಂಗವಾಗಿ ದೇವಿಯ ಪ್ರವಚನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಗಣೇಶ ಭಟ್ ಅವರಿಂದ ದೇವಿಯ ಪ್ರವಚನ ಕಾರ್ಯಕ್ರಮ ನೇರವೇರಿಸಲಾಗಿತ್ತು. ಈ ವೇಳೆ ಗಣೇಶ ಭಟ್ ಅವರು ವೇದಿಕೆ ಮೇಲೆ ಕುಳಿತು ಪ್ರವಚನ ಮಾಡುವಾಗ ಮಂಗವೊಂದು ಅವರ ಬಳಿ ಬಂದು ಕುಳಿತು ಪ್ರವಚನವನ್ನು ಕೇಳಿದೆ.
ಶಾಂತವಾಗಿ ಕುಳಿತು ಯಾರಿಗೂ ತೊಂದರೆ ಮಾಡದೇ ಪ್ರವಚನ ಕೇಳಿದ ಈ ಕೋತಿಯನ್ನು ನೋಡಿ ಭಕ್ತರು ಅಚ್ಚರಿಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇದ್ದರೂ ಮಂಗ ಮಾತ್ರ ಪ್ರವಚಕರಾದ ಗಣೇಶ್ ಭಟ್ ಅವರ ಹತ್ತಿರ ಕುಳಿತು ಪ್ರವಚನ ಕೇಳಿದೆ. ಅಷ್ಟೇ ಅಲ್ಲದೇ ಪ್ರವಚಕರಾದ ಗಣೇಶ್ ಭಟ್ ಅವರು ಕೂಡ ಮಂಗನನ್ನು ಪಕ್ಕದಲ್ಲೇ ಕೂರಿಸಿಕೊಂಡು ಪ್ರವಚನವನ್ನು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=kGJGxMAwChs&feature=youtu.be