ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಪುರಸಭೆ ಕಚೇರಿಗೆ ಕೋತಿ ಎಂಟ್ರಿ ಕೊಟ್ಟಿದೆ.
ಪಟ್ಟಣದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ವೇಳೆ ಮಂಗವೊಂದು ಪುರಸಭೆ ಕಚೇರಿಗೆ ನುಗ್ಗಿ ಟೇಬಲ್ ಮೇಲೆ ಕುಳಿತು ಚೇಷ್ಟೆ ಮಾಡಿದೆ. ಅಲ್ಲದೆ ಅಧಿಕಾರಿಗಳ ಕೈ ಎಳೆದು, ಮೊಬೈಲ್ ಹಿಡಿದು ಟೇಬಲ್ ಮೇಲೆ ಕುಳಿತು, ಕಚೇರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ತನ್ನ ದರ್ಬಾರ್ ನಡೆಸಿದೆ.
Advertisement
Advertisement
ಹೊರಗಡೆ ಪೊಲೀಸರ ಕಂಗಾವಲಿನಲ್ಲೇ ಚುನಾವಣೆ ಕಚೇರಿಗೆ ಕೋತಿ ನುಗ್ಗಿ ತನ್ನ ತುಂಟಾಟ ನಡೆಸಿದೆ. ನಂತರ ತುಂಟ ಕಪಿರಾಯನಿಗೆ ಚುನಾವಣಾ ಸಿಬ್ಬಂದಿ ಚಹಾ ಕುಡಿಸಿ ಕಳುಹಿಸಿದ್ದಾರೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.