ತುಮಕೂರು: ಕೋತಿಯೊಂದು ಶಾಸಕರ ಜೊತೆ ಉಪಹಾರ ಸೇವಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರು ಎಂದಿನಿಂತೆ ಇಂದು ಬೆಳಗ್ಗೆ ಉಪಹಾಸ ಸೇವಿಸಲು ಕುಳಿತಿದ್ದರು. ಈ ವೇಳೆ ಇದ್ದಕ್ಕಿದ್ದಂತೆಯೇ ಕೋತಿಯೊಂದು ನೇರವಾಗಿ ಬಂದು ಸುರೇಶ್ ಬಾಬು ಅವರು ಕುಳಿತಿದ್ದ ಡೈನಿಂಗ್ ಟೇಬಲ್ ಮೇಲೆ ಬಂದು ಕುಳಿತಿದೆ.
ಕೋತಿ ಕುಳಿತಿದ್ದಂತೆಯೇ ಶಾಸಕರು ತನ್ನ ತಟ್ಟೆಯಲ್ಲಿದ್ದ ಉಪಹಾರವನ್ನು ಕೋತಿಗೂ ತಿನ್ನಿಸಿದ್ದಾರೆ. ಹೀಗೆ ತಿಂದು ಹೊಟ್ಟೆ ತುಂಬಿದ ಬಳಿಕ ಕೋತಿ ಅಲ್ಲಿಂದ ವಾಪಸ್ಸಾಗಿದೆ ಎಂದು ತಿಳಿದುಬಂದಿದೆ.
ಸಿ.ಬಿ. ಸುರೇಶ್ ಬಾಬು ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. 2004ರಲ್ಲಿ ಗೆದ್ದರೂ ನಂತರ ಸೋಲು ಅನುಭವಿಸಿದ್ದ ಅವರು 2009 ಹಾಗೂ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಿ.ಬಿ.ಸುರೇಶ್‍ಬಾಬು, 2018ರ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.