ವಿವೇಕಾನಂದರ ಬಗ್ಗೆ ಅವಹೇಳನ – ಅಮೋಘ ಲೀಲಾ ದಾಸ್‌ಗೆ ನಿಷೇಧ ಹೇರಿದ ಇಸ್ಕಾನ್‌

Public TV
2 Min Read
Monk Amogh Lila Das

ನವದೆಹಲಿ: ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ (Swami Vivekananda) ಮತ್ತು ರಾಮಕೃಷ್ಣ ಪರಮಹಂಸ (Ramakrishna Paramahamsa) ಅವರನ್ನು ಅವಹೇಳನ ಮಾಡಿದ್ದಕ್ಕೆ ಆಧ್ಯಾತ್ಮಿಕ ಭಾಷಣಕಾರ ಅಮೋಘ ಲೀಲಾ ದಾಸ್ (Monk Amogh Lila Das) ಅವರಿಗೆ ಇಸ್ಕಾನ್‌ (ISKCON) 1 ತಿಂಗಳ ನಿಷೇಧವನ್ನು ಹೇರಿದೆ.

ಇತ್ತೀಚಿಗೆ ನೀಡಿದ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದರು. ದೈವಿಕ ವ್ಯಕ್ತಿಯು ಪ್ರಾಣಿಯನ್ನು ಕೊಂದು ಅದನ್ನು ತಿನ್ನುತ್ತಾನೆಯೇ? ಅವನು ಮೀನು ತಿನ್ನುತ್ತಾನೆಯೇ? ಮೀನು ಕೂಡ ನೋವು ಅನುಭವಿಸುತ್ತದೆ. ಮತ್ತು ವಿವೇಕಾನಂದರು ಮೀನು ತಿಂದರೆ, ದೈವಿಕ ವ್ಯಕ್ತಿ ಮೀನು ತಿನ್ನಬಹುದೇ ಎಂದು ಪ್ರಶ್ನಿಸಿದ್ದರು.

Monk Amogh Lila Das ridicules Swami Vivekananda for eating fish in viral video gets banned

ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಬದನೆಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ? ಅಥವಾ ಭಗವದ್ಗೀತೆ ಅಧ್ಯಯನಕ್ಕಿಂತ ಫುಟ್ಬಾಲ್ ಆಡುವುದು ಮುಖ್ಯ ಎಂದು ಹೇಳುವುದು ಸರಿಯೇ?. ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ಇಲ್ಲೇ ಇದ್ದಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳುವ ಎಲ್ಲವನ್ನೂ ನಾವು ಕುರುಡಾಗಿ ನಂಬಬಾರದು ಎಂದು ತಿಳಿಸಿದ್ದರು.  ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಅಮೋಘ ಲೀಲಾ ದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ನೆಟ್ಟಿಗರಿಂದ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇಸ್ಕಾನ್‌ ಅಮೋಘ ಲೀಲಾ ದಾಸ್ ಅವರ ಪ್ರವಚನಗಳಿಗೆ 1 ತಿಂಗಳ ಮಟ್ಟಿಗೆ ನಿಷೇಧ ಹೇರಿದೆ. ಅಷ್ಟೇ ಅಲ್ಲದೇ ಈ ಹೇಳಿಗೆ ವಿಷಾದ ವ್ಯಕ್ತಪಡಿಸಿದೆ.

ಅಮೋಘ ಲೀಲಾ ದಾಸ್ ಯಾರು?
43 ವರ್ಷದ ಅಮೋಘ ಲೀಲಾ ದಾಸ್ ಸನ್ಯಾಸಿಯಾಗಿದ್ದು 12 ವರ್ಷಗಳಿಂದ ಇಸ್ಕಾನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಪ್ರಸ್ತುತ ಇಸ್ಕಾನ್‌ನ ದ್ವಾರಕಾ ಚಾಪ್ಟರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲಕ್ನೋದ ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರ ನಿಜವಾದ ಹೆಸರು ಆಶಿಶ್‌ ಅರೋರಾ. ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ 2004 ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಇವರು ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2010 ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದು 29ನೇ ವಯಸ್ಸಿನಲ್ಲಿ ಇಸ್ಕಾನ್‌ ಸೇರಿದರು. ಧಾರ್ಮಿಕ ಪ್ರವಚನ ನೀಡುವ ಮೂಲಕ ಸಾಮಾಜಿಕ ಜಾಲಾತಣದಲ್ಲಿ ಅಪಾರ ಅಭಿಮಾನಿಗಳನ್ನು ಅಮೋಘ ಲೀಲಾ ದಾಸ್ ಹೊಂದಿದ್ದಾರೆ.

 

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article