ದೇವಾಲಯದ ಹುಂಡಿ ಒಡೆದು ಹಣ ಕಳವು

Public TV
1 Min Read
tumkur temple 2

ತುಮಕೂರು: ದೇವಾಲಯದ ಹುಂಡಿ ಒಡೆದು ಹಣ ದೋಚಿದ ಘಟನೆ ಕೊಡಿ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

tumkur temple 1

ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಮಧ್ಯರಾತ್ರಿ ಸುಮಾರು 4 ಗಂಟೆ ವೇಳೆಗೆ ಈ ಪ್ರಕರಣ ನಡೆದಿದೆ. ದೇವಸ್ಥಾನದಲ್ಲಿದ್ದ ಬೆಳ್ಳಿ ಸಾಮಗ್ರಿ, ಚಿನ್ನದ ಕಣ್ಣುಗಳು, ಚಿನ್ನದ ತಾಳಿಯನ್ನು ಕಳ್ಳರು ದೋಚಿದ್ದಾರೆ. ದೇವಸ್ಥಾನ ಛಾವಣಿಯಿಂದ ಕಳ್ಳರು ದೇಗುಲದ ಒಳಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಮನ್‌ ಕಿ ಬಾತ್‌: ಕೋವಿಡ್‌ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

tumkur temple 3

ದೇವಸ್ಥಾನ ಹುಂಡಿ ಒಡೆದು ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆಳ್ಳಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಮತ್ತೆ ಶುರುವಾಯ್ತು ಮಳೆ – ತಮಿಳುನಾಡಿನ ಅನೇಕ ಪ್ರದೇಶ ಜಲಾವೃತ

ಇತ್ತೀಚಿನ ದಿನಗಳಲ್ಲಿ ದೇಗುಲದ ಹಣ ಕದಿಯುವವರ ಸಂಖ್ಯೆ ಅಧಿಕವಾಗುತ್ತಿದೆ. ಈ ಘಟನೆಯ ಕುರಿತು ಗಂಭೀರ ತನಿಖೆಯಾಗಿ, ಆದಷ್ಟು ಬೇಗ ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *