ಬೆಂಗಳೂರು: ವಾಹನಗಳನ್ನು ಎಲ್ಲೆಂದರಲ್ಲಿ ರಸ್ತೆಯಲ್ಲಿ ಪಾರ್ಕ್ ಮಾಡೋರು, ಪಾರ್ಕಿಂಗ್ ಜಾಗ ಇಲ್ಲದೆ ಮನೆ ಮುಂದಿನ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡೋರು ಇನ್ಮುಂದೆ ದುಡ್ಡು ಕಟ್ಟಲೇಬೇಕು.
ಅರೇ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಪಾರ್ಕ್ ಮಾಡಿದ್ರೆ ನಾವ್ಯಾಕೆ ಕಟ್ಟೋಣ ಅಂತೆಲ್ಲ ಹೇಳಂಗಿಲ್ಲ. ಏಕೆಂದರೆ ಸ್ಟ್ರೀಟ್ ಪಾರ್ಕಿಂಗ್ ಹಾವಳಿಗೆ ತಡೆಯೊಡ್ಡಲು ಸರ್ಕಾರ ಭರ್ಜರಿ ಕತ್ತರಿ ಹಾಕಿದ್ದು ಈ ಯೋಜನೆಯಿಂದ ಕೊಂಚ ಆದಾಯನೂ ಬರುತ್ತದೆ ಎನ್ನುವ ಪ್ಲಾನ್ ಕೂಡ ಇದೆ.
ಆಯಾಯ ಏರಿಯಾದ ಕೆಲ ರಸ್ತೆಗಳಲ್ಲಿ ವಾಹನ ಪಾರ್ಕ್ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಅದು ಈಗ ಇರುವಂತೆ ಉಚಿತವಲ್ಲ ಅಲ್ಲಿ ದುಡ್ಡು ಕಟ್ಟಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಒಂದು ಕಮಿಟಿ ರಚನೆಯಾಗಲಿದ್ದು, ಪಿಡಬ್ಲ್ಯೂಡಿ, ಬಿಬಿಎಂಪಿ, ಟ್ರಾಫಿಕ್ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಅಧಿಕಾರಿಗಳು ಕೂಡ ಕಮಿಟಿಯಲ್ಲಿ ಇರುತ್ತಾರೆ.
ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಬಂದಿದ್ದು ಈ ಯೋಜನೆಗೆ ಸಂಚಾರಿ ತಜ್ಞರು ವಿರೋಧ ವ್ಯಕ್ತಪಡಿಸುತ್ತಾರೆ. ರಸ್ತೆ ಬದಿ ಪಾರ್ಕಿಂಗ್‍ನಿಂದ ಟ್ರಾಫಿಕ್ ಸಮಸ್ಯೆ ಉದ್ಭವಾಗುತ್ತಿದೆ. ಈಗ ಪೇ ಮಾಡಿ ಪಾರ್ಕಿಂಗ್ ಮಾಡಿ ಅಂದರೆ ಇನ್ನಷ್ಟು ಸಮಸ್ಯೆ ಉಲ್ಬಣವಾಗುತ್ತೆ ಎಂದು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv