ಕಲಬುರಗಿ: ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೊಂದೇ ಕಳಂಕ ಸೇರಿಕೊಳ್ತಿದೆ. ಆಹಾರ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಇದೀಗ ಹೈ.ಕ. ಅಭಿವೃದ್ಧಿ ಹೆಸರಲ್ಲಿ ಹೈಕಮಾಂಡ್ ಓಲೈಕೆಗೆ ಹಣ ಪೋಲು ಮಾಡಿರುವ ಬಗ್ಗೆ ಗೊತ್ತಾಗಿದೆ.
Advertisement
ಹೈದರಾಬಾದ್ ಕರ್ನಾಟಕ ರೀಜನಲ್ ಡೆವಲಪ್‍ಮೆಂಟ್ ಬೋರ್ಡ್ ಇರೋದು ಹೈ-ಕ ಪ್ರದೇಶದ ಅಭಿವೃದ್ಧಿಗಾಗಿಯೇ ಅಂತಾ ಜನರು ನಂಬಿದ್ರು. ಆದ್ರೆ ಮಂಡಳಿಗೆ ಬರುವ ಹಣ ರಾಜಕೀಯ ಪ್ರಚಾರಕ್ಕೆ ಪೋಲಾಗ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
Advertisement
Advertisement
2014-15ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಲಬುರಗಿಗೆ ಆಗಮಿಸಿದ್ರು. ಈ ವೇಳೆ ಬೃಹತ್ ಸಮಾವೇಶ ನಡೆಸಲಾಯ್ತು. ಈ ಸಮಾವೇಶಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣದಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದ್ದು, ಬರೋಬ್ಬರಿ 23 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
Advertisement
ಅಲ್ಲದೆ ಮಂಡಳಿ ಅಧ್ಯಕ್ಷರ ಕಾರು ಅಪಘಾತವಾದ್ರೆ ಎಫ್‍ಐಆರ್ ಮಾಡಿಸಿ, ವಿಮಾ ಕಂಪನಿಯಿಂದ ಹಣವನ್ನು ಪಡೀಬೇಕು. ಆದ್ರೆ ಹಿಂದಿನ ಅಧ್ಯಕ್ಷ ಖಮರುಲ್ ಇಸ್ಲಾಂ ಅವರು ನಿಯಮವನ್ನು ಗಾಳಿಗೆ ತೂರಿ ಮಂಡಳಿಯಿಂದ 2 ಲಕ್ಷದ 26 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಅನ್ನೋದು 2014-15ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದೆ.