ಮೈಸೂರು: ಎಸ್‌ಬಿಐ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣ ಇದ್ದಕಿದ್ದಂತೆ ಮಂಗಮಾಯಾ ಆಗ್ತಿದ್ದು ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ((SBI Holders) ಆತಂಕ ಶುರುವಾಗಿದೆ.
ಇದ್ದಕಿದ್ದಂತೆ ಅಕೌಂಟ್ ಬ್ಯಾಲೆನ್ಸ್ ಮೈನಸ್ ಆಗ್ತಿದೆ. ಅಕೌಂಟ್‌ನಲ್ಲಿ ಬೆಳಿಗ್ಗೆ ಇದ್ದ ದುಡ್ಡು ರಾತ್ರಿ ಆಗೋದ್ರಲ್ಲಿ ಮಾಯ ಆಗ್ತಿದೆ. ಒಬ್ಬರಲ್ಲ ಇಬ್ಬರಲ್ಲ ಹಲವು ಜನರ ಅಕೌಂಟ್‌ನಲ್ಲಿ ಬ್ಯಾಲೆನ್ಸ್ (Bank Balance) ಮೈನಸ್ ಆಗ್ತಿದೆ. ಅಕೌಂಟ್ ಸಮಸ್ಯೆ ಬಗ್ಗೆ ವಿಚಾರಿಸಿದ್ರೆ ಬ್ಯಾಂಕ್ ಸಿಬ್ಬಂದಿಯಿಂದ ನೋ ರೆಸ್ಪಾನ್ಸ್. ಮೈಸೂರಿನ (Mysuru) ಯಾದವಗಿರಿ, ಕುವೆಂಪುನಗರ, ವಿವೇಕಾನಂದರ ವೃತ್ತ ಬ್ರಾಂಚ್ ಸೇರಿ ಹಲವು ಎಸ್‌ಬಿಐ ಬ್ಯಾಂಕ್ ಶಾಖೆಗಳಲ್ಲಿನ ಗ್ರಾಹಕರಿಗೆ ಈ ಸಮಸ್ಯೆ ಆಗಿದೆ. ಇದನ್ನೂ ಓದಿ: ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ
ಯಾದವಗಿರಿ ಶಾಖೆಯ ಗ್ರಾಹಕ ಕಿರಣ್ ಎಂಬುವರ ಅಕೌಂಟ್‌ನಲ್ಲಿ ಇದ್ದಕಿದ್ದಂತೆ ಮೈನಸ್ ಬ್ಯಾಲೆಸ್ ಆಗಿದೆ. ಮಾರ್ಚ್ 25 ರಂದು ಮೈನಸ್ 9,484 ರೂಪಾಯಿ ಬ್ಯಾಲೆನ್ಸ್ ತೋರಿಸಿದೆ. ಸ್ವಾಮಿ ವಿವೇಕಾನಂದ ವೃತ್ತ ಶಾಖೆ ಗ್ರಾಹಕ ರವಿ ಎಂಬುವರ ಅಕೌಂಟ್‌ನಲ್ಲೂ ಇದ್ದಕ್ಕಿದ್ದಂತೆ ಮೈನಸ್ ಬ್ಯಾಲೆನ್ಸ್ ಆಗಿದೆ. ಇದನ್ನೂ ಓದಿ: Modi Very Smart Man, ಶ್ರೇಷ್ಠ ಪ್ರಧಾನಿ – ಸುಂಕ ಘರ್ಷಣೆ ನಡುವೆ ಮೋದಿ ಗುಣಗಾನ ಮಾಡಿದ ಟ್ರಂಪ್
ಯಾದವಗಿರಿ ಶಾಖೆಯ ಸುಮಾರು 500ಕ್ಕೂ ಹೆಚ್ಚು ಖಾತೆಗಳಲ್ಲಿ ಸಮಸ್ಯೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಬ್ಯಾಂಕ್ ಖಾತೆದಾರರು ಆತಂಕದಲ್ಲಿದ್ದಾರೆ. ಇದನ್ನೂ ಓದಿ: Myanmar Earthquake | ಸಾವಿನ ಸಂಖ್ಯೆ 694ಕ್ಕೆ ಏರಿಕೆ, 1,600ಕ್ಕೂ ಹೆಚ್ಚು ಮಂದಿಗೆ ಗಾಯ!