– ಲಕ್ಷಾಂತರ ರೂಪಾಯಿ ನಗದು, ಮದ್ಯ ಸೀಜ್
ಬೆಂಗಳೂರು: ರಾಜ್ಯದೆಲ್ಲೆಡೆ ದಾಖಲೆಯಿಲ್ಲದ ಹಣ ಸಾಗಾಟ ನಡೆಯುತ್ತಿದ್ದ ಪರಿಣಾಮ ಚೆಕ್‍ಪೋಸ್ಟ್ ಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದಾಖಲೆ ಇಲ್ಲದೆ ಹಣ ಸಾಗಾಣಿಕೆಗೆ ಯತ್ನಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ಹಣವನ್ನು ಜಪ್ತಿ ಮಾಡಲಾಗಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 20 ಲಕ್ಷ ರೂಪಾಯಿಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Advertisement
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಜಗದೀಶ್ ಗುರುಗುಂಟ, ನಾಗಪ್ಪ ಸನದೆ ಮತ್ತು ದೇವನ್ ಅಪ್ಪಾ ಸಾಹೇಬ್ ದೇಸಾಯಿ ಅವರಿಗೆ ಸೇರಿದ್ದ ಹಣ ಎನ್ನಲಾಗಿದೆ. ದಾಖಲೆ ಇಲ್ಲದೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ತಹಶೀಲ್ದಾರ್ ಶಶಿಧರ್ ಮಾಡ್ಯಾಳ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಈ ಹಣ ಯಾರದ್ದು, ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
Advertisement
Advertisement
ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಬೆಳ್ಳಿ ಹಾಗೂ ಬಂಗಾರದ ಒಡವೆಗಳನ್ನು ದಾವಣಗೆರೆಯಲ್ಲಿ ಫ್ಲೇಯಿಂಗ್ ಸ್ಕ್ವಾಡ್ ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಗರದ ರಿಲಯನ್ಸ್ ಮಾರ್ಕೆಟ್ ಬಳಿ ಹೊಸಪೇಟೆ ಮೂಲದ ಏಂ 35-ಓ-7446 ನಂಬರ್ ಕಾರಿನಲ್ಲಿ ಸಾಗಿಸುತ್ತಿದ್ದ 10 ಕೆಜಿ ಬೆಳ್ಳಿ ಆಭರಣ, 650 ಗ್ರಾಂ ಬಂಗಾರದ ಮೂಗುತಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್.ಪಿ ಚೇತನ್ ರವರ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥ ಸಾಹಿಲ್ ಅಬ್ದುಲ್ ಬಾಷಾ ನೇತೃತ್ವದಲ್ಲಿ ಕಾರ್ ಪರಿಶೀಲನೆ ನಡೆಸಿದಾಗ ದಾಖಲೆ ಇಲ್ಲದೆ ಬೆಳ್ಳಿ ಹಾಗೂ ಚಿನ್ನಾಭರಣಗಳು ಪತ್ತೆಯಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರು, ಆಭರಣ ಹಾಗೂ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅಪಾರ ಪ್ರಮಾಣದ ಆಭರಣಗಳನ್ನು ತಂದು ಅಭ್ಯರ್ಥಿಗಳಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement
ಬೀದರ್‍ನಲ್ಲಿ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಮದ್ಯವನ್ನು ಜಪ್ತಿ ಮಾಡಿದ್ದಾರೆ. ವಿದೇಶಿ ಬ್ರ್ಯಾಂಡ್‍ನ 1300 ಮದ್ಯ ಬಾಟಲ್‍ಗಳನ್ನು ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಚಂಡಕಾಪೂರ್ ಚಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಒಟ್ಟು 54 ಲಕ್ಷ ಮೌಲ್ಯದ ಮದ್ಯ ಹಾಗೂ 2 ಕಾರನ್ನು ವಶಕ್ಕೆ ಪಡೆದಿದ್ದು, ಜೊತೆಗೆ ಇಬ್ಬರು ಆರೋಪಿಗನ್ನು ಅಬಕಾರಿ ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದ ಆಚಮಟ್ಟಿ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ 76,22 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ನರಗುಂದ ತಹಶೀಲ್ದಾರ್ ಆಶಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಹಾಸನದಿಂದ ಗೋಕಾಕ್‍ಗೆ ಮದ್ಯವನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. 1,700 ಬಾಕ್ಸ್ ಮದ್ಯವನ್ನು ವಶಕ್ಕೆ ಪಡೆದು ಗದಗಕ್ಕೆ ಅಧಿಕಾರಿಗಳು ಕಳುಹಿಸಿದ್ದಾರೆ.
ರಾಯಚೂರಿನಲ್ಲಿ ತೆಲಂಗಾಣದಿಂದ ಅಕ್ರಮವಾಗಿ ಸಾಗಣೆಯಾಗುವ ಮದ್ಯ ಹಾಗೂ ಕಲಬೆರಕೆ ಸೇಂದಿ ದಂಧೆಯ ನಿಯಂತ್ರಣಕ್ಕೆ ಅಂತರ್ ರಾಜ್ಯ ಪೊಲೀಸರು ಪಣತೊಟ್ಟು ನಿಂತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಐದು ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಒಟ್ಟಾಗಿ ಗಡಿಭಾಗದಲ್ಲಿ ಅಕ್ರಮ ಸಾಗಾಣೆ ನಿಯಂತ್ರಣಕ್ಕೆ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv