– ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನೆ
ಬೆಂಗಳೂರು: ಸ್ಕಿಮರ್ ಜಾಲದ ಬೆನ್ನಲ್ಲೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಬ್ಯಾಂಕ್‍ನಲ್ಲಿ ಇಟ್ಟ ದುಡ್ಡು ಸೇಫ್ ಅಲ್ಲ ಎಂದು ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನಿಸಲಾಗಿದೆ.
ಹೌದು. ಎಟಿಎಂಗೆ ದತ್ತಾಂಶಗಳನ್ನು ಕದಿಯುವ ಸ್ಕಿಮರ್ ಆಳವಡಿಸಿ ಜನರ ದುಡ್ಡನ್ನು ಕದಿಯವ ಖತರ್‍ನಾಕ್‍ಗಳನ್ನು ಪೊಲೀಸರು ಹಿಡಿದ ಬೆನ್ನಲ್ಲೆ ಬ್ಯಾಂಕ್‍ನ ಇಂಟರ್‍ನೆಟ್‍ಗೆ ಕನ್ನ ಹಾಕುವ ಟೀಮ್ ಬಗ್ಗೆ ಬೆಳಕಿಗೆ ಬಂದಿದೆ.
Advertisement
ಬ್ಯಾಂಕುಗಳಲ್ಲಿರುವ ನಿಮ್ಮ ಆಕೌಂಟ್ ಡೀಟೈಲ್ಸ್ ತಿಳಿದುಕೊಂಡು ಕನ್ನ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸೈಬರ್ ಸಂಸ್ಥೆಯ ಸಹಾಯ ಯಾಚಿಸಿವೆ. ಇಂಟರ್ನಲ್ ಮಾಹಿತಿ ಸೋರಿಕೆಯಾಗ್ತಿರೋದು ಬ್ಯಾಂಕುಗಳಿಂದಾನೆ ಅನ್ನೋದು ಇನ್ನೊಂದು ಸ್ಫೋಟಕ ಸತ್ಯ.
Advertisement
ಬ್ಯಾಂಕ್ ಡೇಟಾ ಲೀಕ್ ಹೇಗೆ?: ಬ್ಯಾಂಕ್ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಪೆನ್‍ಡ್ರೈವ್ ಅಥವಾ ಯಾವುದಾದರೂ ಸಿಡಿಯನ್ನು ನೀಡಲಾಗುತ್ತದೆ. ಇದನ್ನು ಬ್ಯಾಂಕ್ ಸಿಬ್ಬಂದಿಗಳು ಕಚೇರಿಯ ಕಂಪ್ಯೂಟರ್‍ಗೆ ಹಾಕಿದ ತಕ್ಷಣ ವೈರಸ್ ಆಟ್ಯಾಕ್ ಆಗಿ ಮಾಹಿತಿ ಲೀಕ್ ಆಗುತ್ತದೆ.
Advertisement
ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿಗಳ ಇ-ಮೇಲ್‍ಗಳಿಗೆ ವೈರಸ್ ಇರುವ ಲಿಂಕ್‍ಗಳನ್ನು ಕಳಿಸಲಾಗುತ್ತಿದೆ. ಈ ಲಿಂಕ್‍ಗಳನ್ನು ಕಚೇರಿ ಕಂಪ್ಯೂಟರ್‍ನಲ್ಲಿ ಒಪನ್ ಮಾಡಿದರೆ ಅಕೌಂಟ್ ಡೀಟೈಲ್ಸ್ ಕಳ್ಳರ ಪಾಲಾಗುತ್ತದೆ. ಇದರಿಂದ ಅದೆಷ್ಟೋ ಜನರ ದುಡ್ಡು ಸದ್ದಿಲ್ಲದೆ ಅಕೌಂಟ್‍ನಿಂದ ಮಾಯವಾಗಿದೆ.
Advertisement
ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ಸಂಸ್ಥೆಯವರು ಆರ್‍ಬಿಐಗೆ ಪತ್ರ ಬರೆದಿದ್ದು, ಇದರ ಬಗ್ಗೆ ಗಮನ ಹರಿಸಿ, ಒಂದು ಕಮಿಟಿ ರಚನೆ ಮಾಡಿ. ಎಟಿಎಂಗೆ ವಿಸಿಟ್ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಅಂತಾ ಹೇಳಿದ್ದಾರೆ.