ನವದೆಹಲಿ: ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ನಿನ್ನೆಯಷ್ಟೇ ಜಾರಿ ನಿರ್ದೇಶನಾಲಯ (ED) ಪಿಎಫ್‌ಐಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಇದೀಗ ಪಿಎಫ್‌ಐಗೆ ಸಂಬಂಧಿಸಿದ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ.
Advertisement
ಪಿಎಫ್‌ಐಗೆ ಚೀನಾ ಮತ್ತು ಗಲ್ಫ್ ದೇಶಗಳಿಂದ ದೇಣಿಗೆ ಹರಿದುಬಂದಿದೆ. 2019-20ರಲ್ಲಿ ಪಿಎಫ್‌ಐ ಸದಸ್ಯ, ಸಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ರೌಫ್ ಷರೀಫ್ ಅವರ ಬ್ಯಾಂಕ್ ಖಾತೆಗೆ ಚೀನಾದಿಂದಲೇ 1 ಕೋಟಿಗೂ ಹೆಚ್ಚು ಹಣ ಜಮೆ ಆಗಿದೆ. ಬೆಂಗಳೂರು ಗಲಭೆ ಆರೋಪಿ ಎಸ್‌ಡಿಪಿಐನ ಕಲೀಂ ಪಾಶಾ ಖಾತೆಗೆ ಚೀನಾ ಮೂಲದ ಕಂಪನಿಯಿಂದ 5 ಲಕ್ಷ ವರ್ಗಾವಣೆ ಆಗಿದೆ. ಇದನ್ನೂ ಓದಿ: ದೇಶದಲ್ಲಿ ಬ್ಯಾನ್ ಆಗುತ್ತಾ ಪಿಎಫ್‍ಐ? – ಇಡಿಯಿಂದ 23 ಬ್ಯಾಂಕ್ ಖಾತೆ ಫ್ರೀಜ್
Advertisement
ಪಿಎಫ್ಐ ಮತ್ತು ಅದರ ಅಂಗಸಂಸ್ಥೆ ಆರ್‌ಎಫ್‌ಐನ 15 ಬ್ಯಾಂಕ್ ಖಾತೆಗಳಿಗೆ 2019-20-ರ ನಡ್ವೆ 1 ಕೋಟಿಯಷ್ಟು ಹಣ ಮೊಬೈಲ್‌ಗಳಿಂದ ಐಎಂಪಿಎಸ್ ಆಗಿದೆ. ಯಾರಿಗೂ ಹಣದ ಮೂಲ ಗೊತ್ತಾಗದೇ ಇರಲಿ ಎಂಬ ಕಾರಣಕ್ಕೆ 5ಸಾವಿರದಿಂದ 50 ಸಾವಿ ರೂಪಾಯಿವರೆಗೂ ಹಣವನ್ನು ಐಎಂಪಿಎಸ್ ಮಾಡಲಾಗಿದೆ ಎಂಬುದು ತನಿಖಾ ಸಂಸ್ಥೆಗಳಿಂದ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ
Advertisement
Advertisement
ಈ ಸಂದರ್ಭದಲ್ಲಿಯೇ ಸಿಎಎ ವಿರೋಧಿ ಹೋರಾಟ ತೀವ್ರವಾಗಿತ್ತು. ಹೀಗಾಗಿ ಸಿಎಎ ವಿರೋಧಿ ಹೋರಾಟಗಳಿಗೆ ಪಿಎಫ್‌ಐ ಫಂಡಿಂಗ್ ಮಾಡಿರಬಹುದು ಎಂಬುದು ತನಿಖಾ ಸಂಸ್ಥೆಗಳ ಶಂಕೆಯಾಗಿದೆ. ಈ ಮಧ್ಯೆ ಪಿಎಫ್‌ಐ ಬ್ಯಾನ್‌ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಒತ್ತಾಯಿಸಿದ್ದಾರೆ. ಆದ್ರೆ, ತಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿರೋದಕ್ಕೆ ಪಿಎಫ್‌ಐ ಆಕ್ರೋಶ ಹೊರಹಾಕಿದೆ. ಇದೆಲ್ಲಾ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದೆ.