ಬಳ್ಳಾರಿ: ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ.
Advertisement
ಸಿಎಂಎಸ್ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ನೀಲಕಂಠ ಬಂಧಿತ ಆರೋಪಿ. ನೀಲಕಂಠನಿಗೆ ಕರ್ಣಾಟಕ ಬ್ಯಾಂಕ್‍ನವರು, ಕರ್ಣಾಟಕ ಬ್ಯಾಂಕ್ ಎಟಿಎಂಗಳಿಗೆ ಹಣ ಹಾಕಲು ಸುಮಾರು 50.18 ಲಕ್ಷ ಹಣ ನೀಡಿದ್ದರು. ನೀಲಕಂಠ ಎಟಿಎಂಗೆ ಹಾಕಲು ಕೊಟ್ಟಿದ್ದ ಹಣದ ಜೊತೆಯಲ್ಲಿ ಎಟಿಎಂನಲ್ಲಿ ಇದ್ದ 6 ಲಕ್ಷ ರೂ. ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದ. ಒಟ್ಟು 56.18 ಲಕ್ಷ ಕದ್ದು ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಜಮೀನು ವಿವಾದ – ಕಾರ್ಮಿಕನ ಕಾಲಿನ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ
Advertisement
Advertisement
ಘಟನೆಯು ಶನಿವಾರ ನಡೆದಿದ್ದು, ಪ್ರಕರಣ ನಡೆದ 24 ಗಂಟೆಯಲ್ಲಿ ಖಚಿತ ಮಾಹಿತಿ ಮೇರೆಗೆ, ಆರೋಪಿಯನ್ನು ಕೊಪ್ಪಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕದ್ದ ಹಣದಲ್ಲಿ ನೀಲಕಂಠ ಒಂದು ಮೊಬೈಲ್ ತೆಗೆದುಕೊಂಡಿದ್ದು, ಮೊಬೈಲ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ.