– ಆಸ್ಪತ್ರೆಯ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು
ಕೊಪ್ಪಳ: ಖಾಸಗಿ ಆಸ್ಪತ್ರೆಯಲ್ಲಿ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ ತಗುಲುವ ವೆಚ್ಚವನ್ನು ಸರ್ಕಾರ ಭರಿಸುವ ಉದ್ದೇಶದಿಂದ ಜಾರಿಯಾಗಿರುವ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯಲ್ಲೂ ಹಣ ಪಡೆದು ಕೊಳ್ಳುತ್ತಿದ್ದು, ಖಾಸಗಿ ಆಸ್ಪತ್ರೆಯ ವೈದ್ಯ (Doctor) ಓರ್ವರು ಶಸ್ತ್ರಚಿಕಿತ್ಸೆಗೆ 16,000 ರೂ. ಸುಲಿಗೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರ ಕೊರತೆಯಿಂದ ಶಸ್ತ್ರಚಿಕಿತ್ಸೆ ಸಾಧ್ಯವಾಗದೆ ಇರುವ ಸಮಯದಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ ಈ ಯೋಜನೆಯಿಂದ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರು ಹಣ ಮಾಡಲು ಮುಂದಾಗುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಯೋಜನೆಯಡಿ ಆಯ್ಕೆಯಾದ ರೋಗಿಗಳಿಗೆ ಸುಮಾರು 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ನೀಡಬೇಕು. ಆ ಸಂಪೂರ್ಣ ವೆಚ್ಚವನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಭರಿಸಲಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯ ವೈದ್ಯರು ಯೋಜನೆಯಡಿ ಚಿಕಿತ್ಸೆಯನ್ನು ನೀಡಿ, ಸರ್ಕಾರದಿಂದ ಹಣ ಪಡೆದುಕೊಳ್ಳುವುದರ ಜೊತೆಗೆ ಜನರಿಂದ ಕೂಡ ಸುಲಿಗೆ ಮಾಡಲು ಮುಂದಾಗುತ್ತಿದ್ದಾರೆ. ಇಂತಹ ಪ್ರಕರಣ ಸದ್ಯ ಗಂಗಾವತಿ ನಗರದಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಫ್ಯಾನ್ಸ್ ಮುಂದೆ ಮಧ್ಯದ ಬೆರಳು ತೋರಿಸಿ ಆರ್ಯನ್ ಖಾನ್ ಉದ್ಧಟತನ – ಸ್ಪಷ್ಟನೆ ಕೊಟ್ಟ ಜಮೀರ್ ಪುತ್ರ
ಕೊಪ್ಪಳದ ಗಂಗಾವತಿ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿಯ ಆಸ್ಪತ್ರೆಯ ವೈದ್ಯರು ಆಯುಷ್ಮಾನ್ ಭಾರತ್ ಯೋಜನೆಯಡಿ ಆಯ್ಕೆಯಾಗಿರುವ ರೋಗಿಗೆ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆ ಮಾಡಿ, 16,000 ರೂ. ಸುಲಿಗೆ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ – ಡಿ.9ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಏನಿದು ಘಟನೆ?
ಗಂಗಾವತಿ (Gangavathi) ನಗರದ ಆಶಾ ಕಾರ್ಯಕರ್ತೆಯಾಗಿರುವ ಲಲಿತಾ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರು. ಸರ್ಕಾರಿ ಉಪವಿಭಾಗದ ಆಸ್ಪತ್ರೆಯಲ್ಲಿ ತಜ್ಞರು ಕೊರತೆಯಿಂದ ನಗರದ ಕಂಪ್ಲಿ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೋಗಿದ್ದಾರೆ. ಆಸ್ಪತ್ರೆಯವರು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ರೋಗಿಯನ್ನು ದಾಖಲು ಮಾಡಿಕೊಂಡು, 2024ರ ಸೆ.7ರಂದು ಸಂಜೆ 5 ಗಂಟೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ದಾಖಲು ಮಾಡಿಕೊಳ್ಳುವ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ರೋಗಿಯವರ ಕಡೆಯಿಂದ 5,000 ರೂ. ಪಡೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಶಸ್ತ್ರಚಿಕಿತ್ಸೆಗೆ ಬಳಸುವ ಮೆಡಿಸಿನ್‌ಗಳನ್ನು ಖರೀದಿ ಮಾಡಲಾಗಿದೆ ಎಂದು 6,000 ಸಾವಿರ ರೂ. ಪಡೆದುಕೊಂಡಿದ್ದಾರೆ. ಕೊನೆಯದಾಗಿ ಮನೆಗೆ ಹೋಗುವ ಸಮಯದಲ್ಲಿ ಬಾಕಿ ಬಿಲ್ ಎಂದು 5,000 ರೂ. ಪಡೆದುಕೊಂಡಿದ್ದಾರೆ. ಒಟ್ಟು 3 ಹಂತದಲ್ಲಿ 16,000 ರೂ. ಪಡೆದುಕೊಂಡು ಆಸ್ಪತ್ರೆಯವರು ಯಾವುದೇ ರೀತಿಯ ಬಿಲ್ ನೀಡದೆ ಕಳುಹಿಸಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಬಳಿ ವಾಚ್ ಲೆಕ್ಕ ಕೇಳಿದ ಬಿಜೆಪಿ – ಡಿಕೆಶಿ ಚುನಾವಣಾ ಅಫಿಡವಿಟ್ ಪ್ರದರ್ಶಿಸಿ ಬಿಜೆಪಿ ಟೀಕೆ
ಸತ್ಯ ತಿಳಿಸಿದ ಮೆಸೆಜ್:
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಆಗಮಿಸಿದ ಎರಡ್ಮೂರು ದಿನಗಳಲ್ಲಿಯೇ ಆರೋಗ್ಯ ಇಲಾಖೆಯಿಂದ ನಿಮ್ಮ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆಶಾ ಕಾರ್ಯಕರ್ತೆಗೆ ಮೆಸೇಜ್ ಬಂದಿದೆ. ಆಗ ಎಚ್ಚೆತ್ತುಕೊಂಡ ಆಶಾ ಕಾರ್ಯಕರ್ತೆ ಲಲಿತಾ ಯೋಜನೆಯ ಕುರಿತು ವಿಚಾರಿಸಿದ ಸಮಯದಲ್ಲಿ ಯಾವುದೇ ಹಣ ನೀಡಬಾರದು ಎಂದು ತಿಳಿದಿದೆ. ಕೂಡಲೆ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರ ಗಮನಕ್ಕೆ ತಂದರೆ ಹಣವನ್ನು ವಾಪಸ್ ನೀಡಲಾಗುವುದಿಲ್ಲ ಎಂದು ಕಳುಹಿಸಿದ್ದಾರೆ. ಮಹಿಳಾ ಗುಂಪಿನಲ್ಲಿ ಸಾಲ ಮಾಡಿಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಆಶಾ ಕಾರ್ಯಕರ್ತೆಯು ಸಂಕಟ ತಡೆಯಲು ಆಗದೆ 2024ರ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳಿಗೆ ಘಟನೆ ಕುರಿತು ದೂರು ನೀಡಿ, ಹಣ ವಾಪಸ್ ಕೊಡಿಸಲು ಮನವಿ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದ್ರೂ ತಪ್ಪದ ರೈತರ ಸಂಕಷ್ಟ – 25 ಹೇಳಿದ್ರೂ 20 ಕ್ವಿಂಟಾಲ್ ಮಾತ್ರ ಖರೀದಿ!
ತಪ್ಪೊಪ್ಪಿಕೊಂಡ ಸಿಬ್ಬಂದಿ, ವೈದ್ಯರು:
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಲಂಚ ಪಡೆದುಕೊಂಡಿರುವ ಕುರಿತು ದೂರು ಇರುವುದರಿಂದ ಆಸ್ಪತ್ರೆಯ ವೈದ್ಯ, ಸಿಬ್ಬಂದಿಯನ್ನು ಆಗಿನ ಡಿಸಿ ನಳೀನ್ ಅತುಲ್ ಅವರು ವಿಚಾರಣೆಗೆ ಕರೆಸಿದ್ದಾರೆ. ಈ ವೇಳೆ ಸತ್ಯ ಒಪ್ಪಿಕೊಳ್ಳದೆ ಸುಳ್ಳು ಎಂದು ವಾದಿಸಿದ್ದಾರೆ. ಸತತ ಹೀಗೆ 4 ಬಾರಿ ವಿಚಾರಣೆಯಲ್ಲೂ ಸತ್ಯ ಒಪ್ಪಿಕೊಳ್ಳದೆ ಆಶಾ ಕಾರ್ಯಕರ್ತೆ ಹಣ ನೀಡಿಲ್ಲ ಎಂದು ವಾದ ಮಾಡಿ ಹೋಗಿದ್ದಾರೆ. ಆಶಾ ಕಾರ್ಯಕರ್ತೆ ಹೋರಾಟ ಕೈ ಬಿಡದೆ ಒಂದು ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಕಳೆದ ವಾರವಷ್ಟೇ ಪ್ರಸ್ತುತ ಇರುವ ಡಿಸಿಯವರ ಗಮನಕ್ಕೆ ಪ್ರಕರಣದ ಕುರಿತು ತಿಳಿಸಿದ್ದಾರೆ. ಪುನ: ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯನನ್ನು 5ನೇ ಬಾರಿ ವಿಚಾರಣೆಗೆ ಕರೆಸಲಾಗಿದೆ. ಆಗಲೂ ವೈದ್ಯ, ಸಿಬ್ಬಂದಿ ಸತ್ಯ ಒಪ್ಪಿಕೊಳ್ಳದೆ ವಾದ ಮಾಡಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್‌ನ್ಯೂಸ್ – 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ
ಡಿಸಿ ಸುರೇಶ್ ಹಿಟ್ನಾಳ ಅವರು ಇಬ್ಬರ ಮೇಲೂ ಪ್ರಕರಣ ದಾಖಲು ಮಾಡಿ, ತನಿಖೆ ನಡೆಸಲು ಸ್ಥಳದಲ್ಲಿಯೇ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಭಯಗೊಂಡು ಆಸ್ಪತ್ರೆಯ ಸಿಬ್ಬಂದಿ 16,000 ರೂ. ಪಡೆದುಕೊಂಡಿರುವುದು ಸತ್ಯ ಎಂದು ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಕೂಡಲೇ ವಾಪಸ್ ಹಣ ನೀಡಲು ಡಿಸಿ ಸೂಚಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು 16,000 ರೂ. ಹಣವನ್ನು ಚೆಕ್ ಮೂಲಕ 2025ರ ನ.28ರಂದು ವಾಪಸ್ ಆಶಾ ಕಾರ್ಯಕರ್ತೆಗೆ ನೀಡಿದ್ದಾರೆ. ಅಪರಾಧವನ್ನು ಒಪ್ಪಿಕೊಂಡು ಹಣ ವಾಪಸ್ಸು ನೀಡುತ್ತಿರುವ ಆಸ್ಪತ್ರೆಯವರಿಗೆ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೆ ಇರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಭಾರತಕ್ಕಿಂದು ಪುಟಿನ್ ಭೇಟಿ – ಸುಖೋಯ್ Su-57, S-400, S-500 ಖರೀದಿಗೆ ಬಿಗ್ ಡೀಲ್ ಸಾಧ್ಯತೆ

