ಹುಬ್ಬಳ್ಳಿ: ಉಪಚುನಾವಣೆಯಲ್ಲಿ ಹಣ ನೂರಕ್ಕೆ ನೂರರಷ್ಟು ಕೆಲಸ ಮಾಡಲ್ಲ. ಜನ ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್‌ಗೆ (Congress) ಮತ ಹಾಕುತ್ತಾರೆ. ಮೂರು ಉಪಚುನಾವಣೆ ಮುಗಿದ ನಂತರ ಬಿಜೆಪಿ ಪ್ರತಿಭಟನೆ ಮುಗಿಯುತ್ತದೆ. ಆಗ ಅವರು ಮನೆಗೆ ಹೋಗುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದರು.
ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸಾಮರಸ್ಯ ಇದೆ. ಬಿಜೆಪಿಯಲ್ಲಿ ಇಲ್ಲಾ, ಈ ಬಾರಿ ಕಾಂಗ್ರೆಸ್ ಖಂಡಿತ ಗೆದ್ದೇ ಗೆಲ್ಲುತ್ತದೆ, ಅದರಲ್ಲಿ ಎರಡು ಮಾತಿಲ್ಲ. ವಕ್ಫ್‌ನಲ್ಲಿ ಕಾಂಗ್ರೆಸ್ ತಪ್ಪು ಮಾಡಲಿಲ್ಲ. ಹಿಂದೆ ಬಿಜೆಪಿ ಕೊಟ್ಟ ನೋಟಿಸ್ ಮುಂದುವರೆಯುತ್ತಿದೆ. ಕಾಂಗ್ರೆಸ್ ಎಂದೂ ಕೂಡ ರೈತರ ವಿರೋಧಿ ಅಲ್ಲಾ. ಕಾಂಗ್ರೆಸ್ 22 ಲಕ್ಷ ಎಕರೆ ಜಮೀನು ದೇವರಾಜ ಅರಸ್ ಇದ್ದಾಗ ರಾಜ್ಯದ ಜನರಿಗೆ ಕೊಡುತ್ತಾ ಇರಲಿಲ್ಲ. ನೀವು ಹೇಗೆ ಕಾಂಗ್ರೆಸ್ ರೈತ ವಿರೋಧಿ ಅಂತ ಹೇಳುತ್ತೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ಇಂದು ಚುನಾವಣೆ – ಕಮಲಾ ಅರಳುತ್ತಾ? ಮತ್ತೊಮ್ಮೆ ಟ್ರಂಪ್‌ಗೆ ಸಿಗುತ್ತಾ ಅಧಿಕಾರ?
Advertisement
Advertisement
ವಿಜಯಪುರದಲ್ಲಿ (Vijayapura) ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿ, ಯಾವುದೋ ಒಂದೆರಡು ಆಕಸ್ಮಿಕ ಘಟನೆ ಆಗಿದ್ದರೆ ಧರಣಿ ಮಾಡುತ್ತಾರೆ. ಅವರಿಗೆ ಆ ಅಧಿಕಾರ ಇದೆ. ಅದಕ್ಕೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ನೋಟಿಸ್ ಹಿಂಪಡೆದು ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಅಂದಿದ್ದಾರೆ. ಮೂರು ಚುನಾವಣೆ ಮುಗಿದ ನಂತರ ಪ್ರತಿಭಟನೆ ಮುಗಿಯುತ್ತದೆ. ಆಗ ಬಿಜಿಪಿಯವರು ಮನೆಗೆ ಹೋಗುತ್ತಾರೆ ಎಂದರು. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ | ಗಡಿಜಿಲ್ಲೆ ಬೀದರ್‌ನ ಐತಿಹಾಸಿಕ ತಾಣಗಳ ಮೇಲೆಯೂ ವಕ್ಫ್ ವಕ್ರದೃಷ್ಟಿ!
Advertisement