ಬಳ್ಳಾರಿ: ಭಿಕ್ಷೆ ಬೇಡಿದ ಹಣವನ್ನು ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ದಾನ ಮಾಡಿದ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಮಂಗಳಮುಖಿ ಪಿ.ರಾಜಮ್ಮ ಅವರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಸಿಎಂ, ರಾಜಮ್ಮರ ಸಾಮಾಜಿಕ ಕಳಕಳಿ ಅನನ್ಯ, ಅವರು ಎದುರಿಸುವ ಸವಾಲಿನ ನಡುವೆಯೂ ಸೇವೆ ಆದರ್ಶವಾದ್ದು ಎಂದು ಕೊಂಡಾಡಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ರಾಜಮ್ಮ ಅವರ ನಿಸ್ವಾರ್ಥ ಸೇವೆ ಮಾದರಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: 34 ವರ್ಷಗಳ ಬಳಿಕ ಸಹಪಾಠಿಗಳ ಪುನರ್ ಮಿಲನ – ಸವಿನೆನಪುಗಳ ಮೆಲುಕು!
ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ಸಹ ರಾಜಮ್ಮ ಆಸರೆಯಾಗಿದ್ದಾರೆ. ಭೀಕ್ಷೆ ಬೇಡಿ ತಂದ ಹಣದಿಂದ ಸಮವಸ್ತ್ರ, ಬಟ್ಟೆ, ಪುಸ್ತಕ ಇನ್ನಿತರ ಸಾಮಗ್ರಿಗಳನ್ನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಬಡ ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಎಸ್‌ಐಟಿ ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು: ಯು.ಟಿ. ಖಾದರ್