ನ್ಯೂಯಾರ್ಕ್: ಫ್ರೆಂಚ್ ಮೂಲದ ಚಿತ್ರಕಾರ ಮೋನೆಟ್ ಅವರ ಪೇಂಟಿಂಗ್‍ಗಳು ಸಾಮಾನ್ಯವಾಗಿ ಕೋಟಿಗಟ್ಟೆಲೆ ರೂ. ಬೆಲೆ ಬಾಳುತ್ತದೆ. ಆದರೆ ಸೋಥೆಬಿ ಮಾಡರ್ನ್ ಆರ್ಟ್ ಆಯೋಜಿಸಿದ್ದ ಸೇಲ್‍ನಲ್ಲಿ ಒಂದು ಪೇಂಟಿಂಗ್ ಬರೋಬ್ಬರಿ 778 ಕೋಟಿ ರೂಪಾಯಿಗೆ ಹರಾಜಾಗಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.
ಹೌದು. ಸೋಥೆಬಿ ಮಾಡರ್ನ್ ಆರ್ಟ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಚಿತ್ರಕಾರ ಮೋನೆಟ್ ಅವರ ಖಾಸಗಿ ಕಲೆಕ್ಷನ್‍ನಲ್ಲಿದ್ದ `ಮಿಯೂಲ್ಸ್’ ಪೇಂಟಿಂಗ್ ಸುಮಾರು 110.7 ಮಿಲಿಯನ್ ಡಾಲರ್ (ಅಂದಾಜು 778 ಕೋಟಿ ರೂ.) ಮಾರಾಟವಾಗಿದೆ. ಈ ಮೂಲಕ ಇದು ವಿಶ್ವದಲ್ಲಿಯೇ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಪೇಂಟಿಂಗ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
Advertisement
Advertisement
ಮೋನೆಟ್ ಫ್ರೆಂಚ್ ವರ್ಣಚಿತ್ರಕಾರ ಮತ್ತು ಫ್ರೆಂಚ್ ಇಮ್‍ಪ್ರಿಸನಿಸ್ಟ್ ಪೇಟಿಂಗ್ ಸ್ಥಾಪಕರಾಗಿದ್ದು, 1926 ರಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಚಿತ್ರಕಲೆ ಮಾತ್ರ ಇಂದಿಗೂ ಜೀವಂತವಾಗಿದೆ. ಈ ಹಿಂದೆ ಈ ಪೇಂಟಿಂಗ್ ಅನ್ನು ಖರೀದಿಸುವಾಗ ಮಾಲೀಕ 1986ರಲ್ಲಿ 2.53 ಮಿಲಿಯನ್ ಡಾಲರ್ ಕೊಟ್ಟಿದ್ದನು. ಆದರೆ ಇದೀಗ ಎಂಟು ನಿಮಿಷದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಎಂಟು ಮಂದಿ ಈ ಪೇಂಟಿಂಗ್‍ಗಾಗಿ ಹರಾಜು ಕೂಗಿ, ಕೊನೆಗೆ ಬರೋಬ್ಬರಿ 778 ಕೋಟಿ ರೂ.ಗೆ ಪೇಂಟಿಂಗ್ ಹರಾಜಾಗಿದೆ.
Advertisement
Advertisement
ಈ ದುಬಾರಿ ಪೇಂಟಿಂಗ್‍ನಲ್ಲಿ ಅಂತಹದ್ದೇನಿದೆ ಎಂದು ಇದೀಗ ನೆಟ್ಟಿಗರಲ್ಲಿ ಪ್ರಶ್ನೇ ಹುಟ್ಟುಕೊಂಡಿದೆ. ಬೆಳಗಿನ ಜಾವ ಸೂರ್ಯ ಉದಯ ಆಗುವ ದೃಶ್ಯವನ್ನು ಚಿತ್ರಕಾರ ಈ ಪೇಂಟಿಂಗ್‍ನಲ್ಲಿ ಚಿತ್ರಿಸಿದ್ದಾರೆ. ಈ ಅಮೋಘ ಪೇಂಟಿಂಗ್ ಕಂಡ ಕಲಾ ಅಭಿಮಾನಿಯೊಬ್ಬರು ಇದನ್ನು ದುಬಾರಿ ಮೊತ್ತ ಕೊಟ್ಟು ಖರೀದಿಸಿದ್ದಾರೆ.
Tonight #ClaudeMonet’s Meules became the most valuable Impressionist work of art sold at auction, setting a new record for the artist. The painting achieved $110.7 million — 44 times the price when it last sold at auction in 1986. Watch the bidding battle. https://t.co/faWDFZicyz
— Sotheby's (@Sothebys) May 15, 2019