ಶಿವಮೊಗ್ಗ: ಸೋಮವಾರ ನನ್ನ ಜೀವನದಲ್ಲಿ ಮರೆಲಾಗದ ಕ್ಷಣ. ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಲಕ್ಷಾಂತರ ಜನರು ಈ ವಿಶೇಷ ಕ್ಷಣದಲ್ಲಿ ಭಾಗವಹಿಸಿ. ಇಷ್ಟು ಬೇಗ ವಿಮಾನ ನಿಲ್ದಾಣ (Shivamogga Airport) ಆಗುತ್ತೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬೆಂಗಳೂರಿನ ನಂತರ ಇದೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ ಎಂದರು.
Advertisement
Advertisement
ಮೋದಿಯವರ ಇಡೀ ದೇಶಕ್ಕೆ ಆದರ್ಶವಾದ ವ್ಯಕ್ತಿ ಎಂದು ಹೇಳುತ್ತಾ ನಾಳಿನ ಕಾರ್ಯಕ್ರಮಕ್ಕೆ ಆಗಮಿಸಿ ಶಾಂತ ರೀತಿಯಲ್ಲಿ ವರ್ತಿಸುವಂತೆ ಇದೇ ವೇಳೆ ಬಿಎಸ್‍ವೈ ಮನವಿ ಮಾಡಿದರು. ಇದನ್ನೂ ಓದಿ: ಜಾಕ್ವೆಲಿನ್ ಮೇಲೆ ಮತ್ತೆ ಲವ್? : ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್
Advertisement
ಏರ್ ಪೋರ್ಟ್ ಲೋಕಾರ್ಪಣೆ ಬಿಎಸ್‍ವೈಗೆ ಗಿಫ್ಟ್ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಾಜಾಹುಲಿ, ನೀವು ಏನು ಬೇಕಾದ್ರು ಕರೀರಿ. ಮೋದಿಯವರನ್ನು ಲೋಕಾರ್ಪಣೆ ಮಾಡಲು ಕರೆದಿದ್ದೆವು. ಆಗ ನಿಮ್ಮ ಹುಟ್ಟು ಹಬ್ಬದ ದಿನದಂದೆ ಬರುತ್ತೇವೆ ಎಂದು ಹೇಳಿದ್ದಾರೆ. ಅದು ನನಗೆ ಸಂತೋಷ ತರುವ ವಿಷಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಬಿಎಸ್‍ವೈ ಅವರನ್ನು ಕಡಗಣನೆ ಮಾಡುತ್ತಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾರೂ ನನ್ನನ್ನು ಕಡೆಗಣನೆ ಮಾಡಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತೇನೆ. ಮತ್ತೆ ಅಧಿಕಾರಕ್ಕೆ ತರಲು ಹಾಗೂ ಮೋದಿಯವರ ಕೈ ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ಒಬ್ಬ ಕಾರ್ಯಕರ್ತರಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವನ್ನು ಕೇಂದ್ರದ ನಾಯಕರು ಅದನ್ನು ತೀರ್ಮಾನ ಮಾಡುತ್ತಾರೆ ಎಂದು ಬಿಎಸ್‍ವೈ ತಿಳಿಸಿದರು.