ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಬೇಬಿ ಬಂಪ್ ಅನ್ನು ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಉಡುಗೆ ಧರಿಸಿ, ತಮ್ಮ ಬೇಬಿ ಬಂಪ್‌ನ (Baby Bump) ಕ್ಯಾಮೆರಾ ಕಣ್ಣಿಗೆ ತೋರಿಸಿದ್ದಾರೆ. ಖುಷಿಯಿಂದ ಫೋಟೋಗೆ ಪೋಸ್ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಲೀಡರ್ ಫಹಾದ್ ಅಹ್ಮದ್ ಅವರನ್ನು ಪ್ರೀತಿಸಿ ಸ್ವರಾ ಭಾಸ್ಕರ್ ಮದುವೆಯಾದರು. ಈ ವರ್ಷ ಫೆಬ್ರವರಿ 16ರಂದು ಫಹಾದ್ ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಈಗ ಚೊಚ್ಚಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಮದುವೆಯಾಗಿ ಮೂರೇ ತಿಂಗಳಿಗೆ ತಾಯಿಯಾಗುವ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದರು. ಈ ವಿಚಾರವಾಗಿ ನಟಿ ಟ್ರೋಲ್ ಆಗಿದ್ದರು.
ಸಾಕಷ್ಟು ಸಿನಿಮಾಗಳ ಮೂಲಕ ಸ್ವರಾ ಸಂಚಲನ ಮೂಡಿಸಿದ್ದಾರೆ. ಸದ್ಯ ದಾಂಪತ್ಯದ ಕಡೆ ನಟಿ ಹೆಚ್ಚಿನ ಗಮನ ವಹಿಸುತ್ತಿದ್ದಾರೆ. ಹಾಗಾಗಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಮಗನನ್ನು ಹೀರೋ ಆಗಿ ನೋಡೋದು ಸ್ಪಂದನಾ ಕನಸಾಗಿತ್ತು- ನಿರ್ದೇಶಕ ಮಹೇಶ್
ವೀರೆ ದೇ ವೆಡ್ಡಿಂಗ್, ತನು ವೆಡ್ಸ್ ಮನು, ಫ್ಲೇಶ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ವರಾ ನಟಿಸಿದ್ದಾರೆ.