ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ (Ileana Dcruze) ಅವರು ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಗೂ ಮುನ್ನವೇ ತಾಯಿಯಾಗಿರುವ ಇಲಿಯಾನಾ, ಮಗುವಿನ ತಂದೆ ಯಾರೆಂದು ಇದುವರೆಗೂ ರಿವೀಲ್ ಮಾಡಿಲ್ಲ. ಆದರೆ ಈಗ ತಮ್ಮ ಮಗುವಿನ ತಂದೆ ಯಾರು ಎಂದು ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಡೇಟ್ ನೈಟ್ ಎಂದು ಬಾಯ್ಫ್ರೆಂಡ್ (Boyfriend) ಜೊತೆಯಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.
Advertisement
ಧ್ಯಾನ್ ಜೊತೆ ಕನ್ನಡದ ‘ಹುಡುಗ-ಹುಡುಗಿ’ (Huduga HudugI0 ಸಿನಿಮಾದಲ್ಲಿ ಇಲಿಯಾನಾ ಸೊಂಟ ಬಳುಕಿಸಿದ್ದರು. ಸೌತ್- ಹಿಂದಿ ಸಿನಿಮಾಗಳ ಮೂಲಕ ಗಮನ ಸೆಳೆದಿರೋ ಈ ಸುಂದರಿ ಏಪ್ರಿಲ್ನಲ್ಲಿ ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಲಿಯಾನಾಗೆ ಇನ್ನೂ ಮದುವೆ ಆಗಿಲ್ಲ. ಹೀಗಾಗಿ, ಈ ಮಗುವಿಗೆ ತಂದೆ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ ಮೂಡಿತ್ತು. ಇಷ್ಟು ದಿನ ಮಗುವಿನ ತಂದೆ ಬಗ್ಗೆ ನಟಿ ಗುಟ್ಟಾಗಿ ಇಟ್ಟಿದ್ದರು. ಈಗ ಬಾಯ್ಫ್ರೆಂಡ್ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದಾರೆ. ಅಚ್ಚರಿ ಎಂದರೆ ಆ ವ್ಯಕ್ತಿಯ ಹೆಸರನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ರಚನಾ- ಲೋಕೇಶ್ ದಂಪತಿ
Advertisement
Advertisement
ಸೆಲೆಬ್ರಿಟಿಗಳ ಲೈಫಿನಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲವೂ ಸರ್ವೇ ಸಾಮಾನ್ಯ. ಇದರ ಜೊತೆಗೆ ಮದುವೆ ಆಗದೆ ಮಗು ಪಡೆಯೋದು, ಮದುವೆ ಆದ ಕೆಲವೇ ತಿಂಗಳಿಗೆ ತಂದೆ- ತಾಯಿ ಆಗೋದು ಕಾಮನ್. ಇಲಿಯಾನಾ ಕೂಡ ಇದೇ ಸಾಲಿಗೆ ಸೇರುತ್ತಾರೆ. ಈಗ ನಟಿ ಶೇರ್ ಮಾಡಿರುವ ಫೋಟೋದಲ್ಲಿ ಅವರ ಪಕ್ಕ ಓರ್ವ ವ್ಯಕ್ತಿ ಇದ್ದಾರೆ. ಈ ಸ್ಟೇಟಸ್ಗೆ ಡೇಟ್ ನೈಟ್ ಎನ್ನುವ ಅಡಿಬರಹ ನೀಡಿದ್ದಾರೆ. ಈ ಮೂಲಕ ಇಷ್ಟು ದಿನ ಗುಟ್ಟಾಗಿ ಇಟ್ಟ ವಿಚಾರ ರಿವೀಲ್ ಮಾಡಿದ್ದಾರೆ. ಅವರ ಹೆಸರನ್ನು ನಟಿ ತಿಳಿಸಿಲ್ಲ.
Advertisement
ಇಲಿಯಾನಾ ಅವರು ಅನೇಕರ ಜೊತೆ ಡೇಟಿಂಗ್ ಮಾಡಿದ್ದಾರೆ. ಇವರ ಸಂಬಂಧ ಮದುವೆವರೆಗೆ ಹೋಗಿಲ್ಲ. ನಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಮಗುವಿನ ತಂದೆ ಕತ್ರಿನಾ ಸಹೋದರ ಸೆಬಾಸ್ಟಿನ್ ಎಂದೇ ಸುದ್ದಿಯಾಗಿತ್ತು. ಈಗ ಹೆಸರು ಹೇಳದೇ ಬಾಯ್ಫ್ರೆಂಡ್ ಮುಖ ತೋರಿಸುವುದು ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ.