ಮುಂಬೈ: ತಂದೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಮಗಳನ್ನು ತಾಯಿಯೇ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ರಾಯ್‍ಗಢ್ ಜಿಲ್ಲೆಯ ಖರ್ಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
36 ವರ್ಷದ ದೇವಿಕಾ (ಹೆಸರು ಬದಲಾಯಿಸಲಾಗಿದೆ) ಮಗಳನ್ನು ಕೊಲೆ ಮಾಡಿದ ಮಹಿಳೆ. ರೂಪಿಕಾ (16) ತಾಯಿಯಿಂದಲೇ ಕೊಲೆಯಾದ ಮಗಳು. ದೇವಿಕಾ ಪತಿ ಗೋವಿಂದ್ ಸ್ಥಳೀಯ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ರು. ದಂಪತಿಗೆ ಒಟ್ಟು ನಾಲ್ಕು ಮಕ್ಕಳಿದ್ದು, ಇಬ್ಬರೂ ಪೋಷಕರೊಂದಿಗೆ ವಾಸವಿದ್ದರೆ, ಇನ್ನಿಬ್ಬರು ರಾಜಸ್ಥಾನದ ಸ್ವಂತ ಊರಿನಲ್ಲಿ ವಾಸವಾಗಿದ್ದಾರೆ.
ಏನಿದು ಘಟನೆ?: ದೇವಿಕಾ ಮಾರ್ಚ್ 3 ರಂದು ತಾವು ವಾಸವಾಗಿರುವ ಖರ್ಗರ್ ಫ್ಲಾಟ್ ನಲ್ಲಿ 10:30 ಗೆ ತನ್ನ ದುಪ್ಪಟ್ಟದಲ್ಲಿ ರೂಪಿಕಾಳ ಕುತ್ತಿಗೆಯನ್ನು ಬಿಗಿದು ಕೊಂದಿದ್ದಾಳೆ. ಕೊಲೆಯ ನಂತರ ಮಧ್ಯಾಹ್ನ ಪತಿ ಊಟಕ್ಕೆ ಮನೆಗೆ ಬಂದಿದ್ದಾರೆ. ಈ ವೇಳೆ ಗೋವಿಂದ್ ಮಗಳೆಲ್ಲಿ ಎಂದು ಪತ್ನಿಯನ್ನು ಕೇಳಿದ್ದಾರೆ. ಮಗಳು ಮಲಗಿದ್ದಾಳೆ ಅಂತಾ ದೇವಿಕಾ ಹೇಳಿದ್ದಾಳೆ. ಪತಿ ಊಟ ಮುಗಿಸಿ ಕೆಲಸಕ್ಕೆ ಹೋದ ನಂತರ ಸಂಜೆ 4 ಗಂಟೆಗೆ ಫೋನ್ ಮಾಡಿ ಮಗಳು ಸಾವನ್ನಪ್ಪಿದ್ದಾಳೆ ಅಂತಾ ಹೇಳಿದ್ದಾಳೆ.
ವಿಷಯ ತಿಳಿದು ಸಂಜೆ ಸಂಬಂಧಿಕರು ಮನೆಗೆ ಬಂದು ನೋಡಿದಾಗ ರೂಪಿಕಾಳ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿವೆ. ಪೊಲೀಸರು ಮೊದಲು ರೂಪಿಕಾಳದ್ದು ಸಹಜ ಸಾವು ಅಂತಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದ್ರೆ ಮರಣೋತ್ತರ ಪರೀಕ್ಷೆ ನಂತರ ಕೊಲೆ ಅಂತಾ ಪ್ರಕರಣವೆಂದು ದಾಖಲಿಸಲಾಗಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿ ದೀಲಿಪ್ ಕಾಲೆ ಹೇಳಿದ್ದಾರೆ.
ರಹಸ್ಯ ಬಿಚ್ಚಿಟ್ಟ ರೂಪಿಕಾ ಸ್ನೇಹಿತೆ: ದೇವಿಕಾ ತಂದೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ರೂಪಿಕಾಳ ಮೇಲೆ ಕಳೆದ 6 ತಿಂಗಳನಿಂದ ಹಲ್ಲೆ ಮಾಡ್ತಿದ್ದಳು. ಇದೇ ವಿಷಯವಾಗಿ ದೇವಿಕಾ ಗಂಡ ಮತ್ತು ಪತಿಯನ್ನು ಕೊಲ್ಲುತ್ತೇನೆಂದು ಬೆದರಿಕೆ ಹಾಕಿದ್ದಳಂತೆ. ತಾಯಿ ಕಿರುಕುಳದಿಂದ ಬೇಸತ್ತ ರೂಪಿಕಾ ಎರಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿಯನ್ನು ರೂಪಿಕಾ ಸ್ನೇಹಿತೆ ಸಾರಿಕಾ (ಹೆಸರು ಬದಲಾಯಿಸಲಾಗಿದೆ) ತಿಳಿಸಿದ್ದಾಳೆ.
ದೇವಿಕಾ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಅಂತಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಸೆಕ್ಷನ್ 302 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಅಂತಾ ದಿಲೀಪ್ ಕಾಲೆ ತಿಳಿಸಿದ್ದಾರೆ.