ಮಾಲಿವುಡ್ (Mollywood) ನಟ ಮೋಹನ್ ಲಾಲ್ (Mohan Lal) ಅವರು ಮಮ್ಮುಟ್ಟಿಗಾಗಿ (Mammootty) ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ವಿಚಾರ ಮತ್ತೆ ಭುಗಿಲೆದ್ದಿದೆ. ಈ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:ನನ್ನ ಮೇಲೆ ಕಲ್ಲೆಸೆದಿಲ್ಲ: ಸೋನು ನಿಗಮ್ ಸ್ಪಷ್ಟನೆ
ಮೋಹನ್ ಲಾಲ್ ಅವರು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಮ್ಮುಟ್ಟಿಗಾಗಿ ಪೂಜೆ ಸಲ್ಲಿಸಿರುವ ವಿಚಾರ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ. ಇತ್ತೀಚೆಗೆ ಶಬರಿಮಲೆಯಲ್ಲಿ ಮಮ್ಮುಟ್ಟಿರವರ ಮೂಲ ಹೆಸರು ‘ಮುಹಮ್ಮದ್ ಕುಟ್ಟಿ’ ಹೆಸರಿನಲ್ಲಿ ಮೋಹನ್ ಲಾಲ್ ಪೂಜೆ ಮಾಡಿಸಿದ್ದಾರೆ ಎನ್ನಲಾದ ರಶೀದಿವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಧಾರ್ಮಿಕ ನಂಬಿಕೆಗಳ ಜಿದ್ದಾಜಿದ್ದಿ ಶುರುವಾಗಿದೆ.
ಮಮ್ಮುಟ್ಟಿ ಅವರು ಮೋಹನ್ ಲಾಲ್ ಪರವಾಗಿ ಪೂಜೆ ಸಲ್ಲಿಸಲು ಕೇಳಿದರೆ, ಮಮ್ಮುಟ್ಟಿ ಕ್ಷಮೆಯಾಚಿಸಬೇಕು. ಅಲ್ಲಾನಿಗೆ ಮಾತ್ರ ಪ್ರಾರ್ಥಿಸಬೇಕು ಎಂದೆಲ್ಲಾ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ.
ವಿವಾದ ಭುಗಿಲೆದ್ದ ಬೆನ್ನಲ್ಲೇ ಮೋಹನ್ ಲಾಲ್ ಪ್ರತಿಕ್ರಿಯಿಸಿ, ಮಮ್ಮುಟ್ಟಿ ನನ್ನ ಸಹೋದರನಂತೆ, ಅವರಿಗಾಗಿ ಪ್ರಾರ್ಥನೆ ಮಾಡೋದ್ರರಲ್ಲಿ ತಪ್ಪೇನಿದೆ? ಎಂದು ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿದ್ದಾರೆ.
ಅಂದಹಾಗೆ, ಕೆಲದಿನಗಳ ಹಿಂದೆ ಮಮ್ಮುಟ್ಟಿ ಆರೋಗ್ಯ ಸರಿಯಿಲ್ಲ. ಅವರಿಗೆ ಕ್ಯಾನ್ಸರ್ ಇದೆ. ಹಾಗಾಗಿ ಸ್ನೇಹಿತನಿಗಾಗಿ ಮೋಹನ್ ಲಾಲ್ ಪೂಜೆ ಸಲ್ಲಿಸಿದ್ದಾರೆ ಎಂದೆಲ್ಲಾ ವದಂತಿ ಹಬ್ಬಿತ್ತು. ಆ ನಂತರ ನಟನ ಪಿ.ಆರ್ ಟೀಮ್ ಪ್ರತಿಕ್ರಿಯಿಸಿ, ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ. ಇದು ಸುಳ್ಳು ಸುದ್ದಿ. ರಂಜಾನ್ ಉಪವಾಸದ ಕಾರಣದಿಂದ ಅವರು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಬ್ಬ ಮುಗಿಯುತ್ತಿದ್ದಂತೆ ನಟ ಶೂಟಿಂಗ್‌ಗೆ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ ಮಮ್ಮುಟ್ಟಿ ಅನಾರೋಗ್ಯದ ಸುದ್ದಿಗೆ ಬ್ರೇಕ್ ಬಿದ್ದಿತ್ತು.