– ‘ಅಮ್ಮ’ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಂದಲೂ ರಾಜೀನಾಮೆ ಸಲ್ಲಿಕೆ
ತಿರುವನಂತಪುರಂ: ಮಲಯಾಳಂ (Malayalam) ಚಿತ್ರರಂಗದಲ್ಲಿ ನಟರು ಹಾಗೂ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ (Mohanlal) ರಾಜೀನಾಮೆ ನೀಡಿದ್ದಾರೆ. ಅಮ್ಮ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಮಲಯಾಳಂ ಉದ್ಯಮದಲ್ಲಿ ಮಹಿಳಾ ವೃತ್ತಿಪರರಿಗೆ ಲೈಂಗಿಕ ಕಿರುಕುಳ ಮತ್ತು ನಿಂದನೆ ಬಗ್ಗೆ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬೆಳಕು ಚೆಲ್ಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಚಿತ್ರರಂಗದಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ. ಆರೋಪಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕಾಗಿ ಒತ್ತಡ ಕೇಳಿಬಂದಿದೆ. ಇದನ್ನೂ ಓದಿ: ‘ರಿಪ್ಪನ್ ಸ್ವಾಮಿ’ ಚಿತ್ರದ ಪೋಸ್ಟರ್ ಔಟ್- ರಾ ಲುಕ್‌ನಲ್ಲಿ ವಿಜಯ್ ರಾಘವೇಂದ್ರ
‘ಅಮ್ಮ’ ಆಡಳಿತ ಸಮಿತಿಯು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಲಾಗಿದೆ ಎಂದು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ. “ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸಾಮಾಜಿಕ-ದೃಶ್ಯ-ಮುದ್ರಿತ ಮಾಧ್ಯಮಗಳಲ್ಲಿ ‘ಅಮ್ಮ’ ಸಂಸ್ಥೆಯ ಆಡಳಿತ ಸಮಿತಿಯ ಕೆಲವು ಪದಾಧಿಕಾರಿಗಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ‘ಅಮ್ಮ’ ಆಡಳಿತ ಸಮಿತಿ ನೈತಿಕ ಹೊಣೆಗಾರಿಕೆಯ ಆಧಾರದಲ್ಲಿ ರಾಜೀನಾಮೆ ನೀಡಿದೆ ಎಂದು ತಿಳಿಸಿದೆ.
‘ಅಮ್ಮ’ವನ್ನು ನವೀಕರಿಸುವ ಮತ್ತು ಬಲಪಡಿಸುವ ಸಾಮರ್ಥ್ಯವಿರುವ ಹೊಸ ನಾಯಕತ್ವವನ್ನು ‘ಅಮ್ಮ’ ಹೊಂದಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ. ಟೀಕಿಸಿದ ಮತ್ತು ಸರಿಪಡಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಮೋಹನ್ ಲಾಲ್ ಹೇಳಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿರೋದೇ ಕ್ರಿಮಿನಲ್ಸ್ ಅಲ್ವಾ?- ದರ್ಶನ್ ಫೋಟೋ ವಿವಾದಕ್ಕೆ ಸುಮಲತಾ ರಿಯಾಕ್ಷನ್