‘ಬೆಂಗಳೂರು ಡೇಸ್’ ಖ್ಯಾತಿಯ ನಜ್ರಿಯಾ ನಜೀಮ್ (Nazriya Nazim) ಕೆಲ ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಬೆನ್ನಲ್ಲೇ ಅವರ ವೈಯಕ್ತಿಕ ಬದುಕಿನ ಬಗ್ಗೆ ಹಲವು ವಿಚಾರಗಳು ಚರ್ಚೆ ಶುರುವಾದ ಬೆನ್ನಲ್ಲೇ ನಜ್ರಿಯಾ ರಿಯಾಕ್ಟ್ ಮಾಡಿದ್ದಾರೆ. ತನ್ನ ಅನುಪಸ್ಥಿತಿಯ ಕುರಿತು ಅಭಿಮಾನಿಗಳಿಗೆ ನಟಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ:ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್ ರಾಹುಲ್, ಮಾವ ಸುನೀಲ್ ಶೆಟ್ಟಿ
ಎಲ್ಲರೂ ಚೆನ್ನಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಕೆಲ ತಿಂಗಳುಗಳಿಂದ ಎಲ್ಲರಿಂದ ದೂರ ಇದ್ದೆ. ನನಗೆ ಸ್ವಲ್ಪ ಸಮಯ ಬೇಕಿತ್ತು. ನಿಮ್ಮೆಲ್ಲರಿಗೂ ತಿಳಿದಿರುವಂತೆ, ನಾನು ಯಾವಾಗಲೂ ಆ್ಯಕ್ಟೀವ್ ಆಗಿರುತ್ತೇನೆ. ಕಳೆದ ಕೆಲವು ತಿಂಗಳುಗಳಿಂದ ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ. ನನ್ನ ಮನಸ್ಸು ಸರಿ ಇಲ್ಲ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ: ಪೀರಿಯಡ್ಸ್ ಬಗ್ಗೆ ಸಮಂತಾ ಓಪನ್ ಟಾಕ್
ನನ್ನ 30ನೇ ಹುಟ್ಟುಹಬ್ಬ, ಹೊಸ ವರ್ಷದ ಆಚರಣೆ, ನನ್ನ ‘ಸೂಕ್ಷ್ಮದರ್ಶಿನಿ’ ಚಿತ್ರದ ಯಶಸ್ಸು ಮತ್ತು ಇತರೆ ಪ್ರಮುಖ ಕಾರ್ಯಕ್ರಮಗಳು ಮಿಸ್ ಆಗಿವೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ನಾನು ಮೌನವಾಗಿರೋದ್ದಕ್ಕಾಗಿ, ಫೋನ್ ಕರೆಗಳನ್ನು ಸ್ವೀಕರಿಸದೇ ಇಲ್ಲದಿರುವುದ್ದಕ್ಕೆ ನನ್ನ ಸ್ನೇಹಿತರಲ್ಲಿ ಕ್ಷಮೆಯಾಚಿಸುತ್ತೇನೆ. ಕೆಲಸಕ್ಕಾಗಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ನನ್ನ ಎಲ್ಲಾ ಸಹನಟರು, ನಿರ್ದೇಶಕರು ಮತ್ತು ನಿರ್ಮಾಪಕರಿಗೂ ನಾನು ಕ್ಷಮೆಯಾಚಿಸುತ್ತೇನೆ ಎಂದು ನಜ್ರಿಯಾ ಹೇಳಿದ್ದಾರೆ.
View this post on Instagram
ಇದು ನನ್ನ ಕಠಿಣ ಸಮಯ. ಆದರೆ ನಾನು ಪ್ರತಿದಿನ ಸುಧಾರಿಸಿಕೊಳ್ಳಲು ಶ್ರಮಿಸುತ್ತಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬೇಕಾಗಿದೆ. ಆದರೆ ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಇದ್ದಕ್ಕಿದ್ದಂತೆ ಏಕೆ ಮೌನವಾದೆ ಎಂಬುದನ್ನು ನನ್ನ ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ವಿವರಿಸಬೇಕೆಂದು ಅನಿಸಿದ್ದರಿಂದ ಇಂದು ಇದನ್ನು ಬರೆದಿದ್ದೇನೆ ಎಂದು ನಜ್ರಿಯಾ ಪತ್ರದ ಮೂಲಕ ತಿಳಿಸಿದ್ದಾರೆ.
ಅಂದಹಾಗೆ, ‘ಪುಷ್ಪ 2’ (Pushpa 2) ಖ್ಯಾತಿಯ ಫಹಾದ್ ಫಾಜಿಲ್ (Fahadh Faasil) ಪತ್ನಿ ನಜ್ರಿಯಾ ಕಳೆದ ನವೆಂಬರ್‌ನಲ್ಲಿ ನಟಿಸಿದ ‘ಸೂಕ್ಷ್ಮದರ್ಶಿನಿ’ ಚಿತ್ರದ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.