ಕನ್ನಡದ ‘ಹೆಬ್ಬುಲಿ’ (Hebbuli) ನಟಿ ಅಮಲಾ ಪೌಲ್ (Amala Paul) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಓಣಂ ಹಬ್ಬದಂದು (ಸೆ.15) ಮೊದಲ ಬಾರಿಗೆ ಮಗನ ಮುಖ ರಿವೀಲ್ ಮಾಡಿದ್ದಾರೆ. ಮುದ್ದಾದ ಮಗನ ಸುಂದರ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಹೊಸ ಫೋಟೋಶೂಟ್‌ನಲ್ಲಿ ದೋಣಿಯಲ್ಲಿ ಕುಳಿತು ಪತಿ ಮತ್ತು ಮಗನ ಜೊತೆ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗನನ್ನು ಹಿಡಿದುಕೊಂಡು ಪತಿ ಜೊತೆ ಅಮಲಾ ಲಿಪ್‌ಲಾಕ್ ಮಾಡಿದ್ದಾರೆ. ಕೊನೆಗೂ ಮಗನ ಫೋಟೋವನ್ನು ನಟಿ ರಿವೀಲ್ ಮಾಡಿದ್ದಕ್ಕೆ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ಅಂದಹಾಗೆ, ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮಿ ಜಗತ್ ದೇಸಾಯಿ (Jagat Desai) ಜೊತೆ ಅಮಲಾ ಮದುವೆಯಾದರು. ಈ ವರ್ಷ ಜೂನ್ 11ರಂದು ಗಂಡು ಮಗುವಿಗೆ ನಟಿ ಜನ್ಮ ನೀಡಿದರು.