ಮಾಲಿವುಡ್‌ನ ಖ್ಯಾತ ನಟ ನಿರ್ಮಲ್ ಬೆನ್ನಿ (Nirmal Benny) ಇಂದು (ಆ.23) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. 37ನೇ ವಯಸ್ಸಿಗೆ ನಿಧನರಾಗಿರುವ ನಟನಿಗೆ ಮಲಯಾಳಂ ಚಿತ್ರರಂಗ (Mollywood) ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್ – ಅದಿತಿ ಪ್ರಭುದೇವ ಚಿತ್ರಕ್ಕೆ ಸೆನ್ಸಾರ್
View this post on Instagram
12 ವರ್ಷಗಳಲ್ಲಿ 5 ಸಿನಿಮಾಗಳಲ್ಲಿ ನಟಿಸಿರುವ ನಿರ್ಮಲ್ ಬೆನ್ನಿಗೆ ಇಂದು ಬೆಳಗ್ಗೆ ಹೃದಯಾಘಾತ ಉಂಟಾಗಿದೆ. ಇನ್ನೂ ನಿರ್ಮಲ್ ಬೆನ್ನಿ ಅವರ ನಿಧನ ವಾರ್ತೆಯನ್ನು ಅವರ ಆಪ್ತ ಸ್ನೇಹಿತ ಮತ್ತು ನಿರ್ಮಾಪಕ ಸಂಜಯ್ ಪಡಿಯೂರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ, 2012ರಲ್ಲಿ ನಿರ್ಮಲ್ ಚಿತ್ರರಂಗಕ್ಕೆ ಕಾಲಿಟ್ಟರು. ನವಗತರ್ಕ್ ಸ್ವಾಗತಂ, ಅಮೆನ್ ಚಿತ್ರದಲ್ಲಿನ ಕೊಚ್ಚನ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು.