ಕನ್ನಡದ ‘ಪೃಥ್ವಿ’ ಸಿನಿಮಾದಲ್ಲಿ ನಟಿಸಿದ್ದ ಮಲಯಾಳಂ ನಟ ಮೋಹನ್‌ಲಾಲ್‌ರನ್ನು (Mohanlal) ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವಿನ ತೊಂದರೆಯಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ನಟನನ್ನು ದಾಖಲಿಸಿದ್ದಾರೆ.
64 ವರ್ಷ ವಯಸ್ಸಿನ ಮೋಹನ್‌ಲಾಲ್ ಅವರು ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ತಿದ್ದಾರೆ. 5 ದಿನಗಳವರೆಗೆ ವಿಶ್ರಾಂತಿಗೆ ಸೂಚಿಸಿಲಾಗಿದೆ. ಸಾರ್ವಜನಿಕರ ಭೇಟಿ ತಪ್ಪಿಸಲು ಮತ್ತು ಸೂಚಿಸಲಾದ ಔಷಧಿ ಅನುಸರಿಸಲು ವೈದರು ಸಲಹೆ ನೀಡಿದ್ದಾರೆ. ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬುವವರು ಹಂಚಿಕೊಂಡಿದ್ದಾರೆ. ಇನ್ನೂ ನೆಚ್ಚಿನ ನಟ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದು ಫ್ಯಾನ್ಸ್ ಆತಂಕದಲ್ಲಿದ್ದರು. ಪ್ರಸ್ತುತ ಅವರ ಹೆಲ್ತ್ ಅಪ್‌ಡೇಟ್ ತಿಳಿದು ನಿರಾಳವಾಗಿದ್ದಾರೆ.
Wishing @Mohanlal a speedy recovery! ❤️???? pic.twitter.com/PjQ31OXcQa
— Sreedhar Pillai (@sri50) August 18, 2024
ಅಂದಹಾಗೆ, ಮಲಯಾಳಂ ಸಿನಿಮಾಗಳ ಜೊತೆಗೆ ಕನ್ನಡದ ಸಿನಿಮಾದಲ್ಲಿ ಕೂಡ ಮೋಹನ್‌ಲಾಲ್ ನಟಿಸುತ್ತಿದ್ದಾರೆ. ‘ಪೊಗರು’ ಖ್ಯಾತಿಯ ನಂದಕಿಶೋರ್ ನಿರ್ದೇಶನದ ‘ವೃಷಭ’ ಸಿನಿಮಾದಲ್ಲಿ ಮೋಹನ್‌ಲಾಲ್ ಮತ್ತು ರಾಗಿಣಿ ನಟಿಸುತ್ತಿದ್ದಾರೆ.