ಕನ್ನಡದ ಸ್ಟಾರ್ ನಟ ರಿಷಬ್ ಶೆಟ್ಟಿ (Rishab Shetty) ಅವರನ್ನು ಮಲಯಾಳಂ ನಟ ಜಯಸೂರ್ಯ (Jayasurya) ಭೇಟಿಯಾಗಿದ್ದಾರೆ. ರಿಷಬ್ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಜಯಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗ ನಿರಂಜನ್, ಅರ್ಜುನ್ ಸರ್ಜಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರಿಷಬ್‌ರನ್ನು ಜಯಸೂರ್ಯ ಭೇಟಿಯಾಗಿದ್ದು, ‘ಕಥನಾರ್ ಮೀಟ್ಸ್ ಕಾಂತಾರ’ ಎಂದು ನಟ ಅಡಿಬರಹ ನೀಡಿದ್ದಾರೆ. ಇಬ್ಬರೂ ಶರ್ಟ್ ಮತ್ತು ಪಂಚೆ ಧರಿಸಿ ನಗುತ್ತಾ ನಡೆದು ಬರುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಅರಸಿ ಬಂದಿದೆ.

ಅಂದಹಾಗೆ, ಜಯಸೂರ್ಯ ನಟನೆಯ ‘ಕಥನಾರ್’ ಈ ವರ್ಷದ ಅಂತ್ಯದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರ ದುಬಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.


