– ನನಗೆ ನೋವು ಗೊತ್ತು, ಕಾನೂನು ಕ್ರಮಕ್ಕೆ ಮುಂದಾಗಲ್ಲ!
ಟ್ರೋಲ್ ವಿಚಾರಕ್ಕೆ ಬಿಗ್ ಬಾಸ್ (Bigg Boss Kannada 11) ಖ್ಯಾತಿಯ ಮೋಕ್ಷಿತ ಪೈ (Mokshitha Pai) ಖಡಕ್ ಉತ್ತರ ಕೊಟ್ಟಿದ್ದಾರೆ.
ʻಪಬ್ಲಿಕ್ ಟಿವಿʼ ಜೊತೆ ಅವರು ಮಾತಾಡಿದರು. ಈ ವೇಳೆ, ಜಿಲೇಬಿ ಕಳ್ಳಿ ಅಲ್ಲ, ಮಕ್ಕಳ ಕಳ್ಳಿ ಎಂಬ ಟ್ರೋಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾನು ನಿರಪರಾಧಿ ಎಂದು ಸಾಬೀತಾಗಿದೆ. ಮತ್ತೆ ಅದನ್ನೇ ಇಟ್ಟುಕೊಂಡು ಟ್ರೋಲ್ ಮಾಡ್ತಾರೆ ಅಂದ್ರೆ ಏನು ಹೇಳೋಕಾಗಲ್ಲ. ನಿರಪರಾಧಿ ಎಂದು ಸಾಬೀತಾದ ಮೇಲೆ ಮತ್ತೆ ಅದನ್ನು ಕೆದಕಿ ಮಾತಾಡಲ್ಲ ಎಂದಿದ್ದಾರೆ.
ಟ್ರೋಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಾನಂತೂ ತೊಂದರೆ ಕೊಡಲ್ಲ. ಯಾಕಂದ್ರೆ ಆ ನೋವು ನನಗೆ ಗೊತ್ತಿದೆ. ಅವರಿಗೆ ಅದೇ ರೀತಿ ತೊಂದರೆ ಕೊಡೋಕೆ ಇಷ್ಟಪಡಲ್ಲ. ವಿವ್ಸ್‌ಗೋಸ್ಕರನೋ ಎನೋ ಒಂದು ಮಾಡಿದ್ದಾರೆ. ನನ್ನ ಹತ್ರ ನಿರಪರಾಧಿ ಎಂಬ ಸರ್ಟಿಫಿಕೆಟ್ ಇದೆ ಎಂದಿದ್ದಾರೆ.
ಬಿಗ್ ಬಾಸ್ ಸಮಯದಲ್ಲೇ ಮಾಡಿದ್ದು ವೋಟಿಗೋ ಎನೋ ಗೊತ್ತಿಲ್ಲ. ಆಗ ನನ್ನ ಫ್ಯಾನ್ಸ್ ನನ್ನ ಜೊತೆಗೆ ಸ್ಟ್ರಾಂಗ್ ಆಗಿ ನಿಂತ್ರು. ನನಗೆ ಎಷ್ಟು ಬೆಂಬಲ ಇದೆ ಎಂಬುದು ಗೊತ್ತಾಯ್ತು, ಅಷ್ಟು ಸಾಕು ಎಂದಿದ್ದಾರೆ.