ಕನ್ನಡ ಕಿರುತೆರೆ `ಪಾರು’ ಧಾರಾವಾಹಿ(Paaru Serial) ಮೂಲಕ ಮನೆಮಾತಾದ ನಟಿ ಮೋಕ್ಷಿತಾ ಪೈ ಇದೀಗ ತಮಿಳಿನ `ಮೀನಾಕ್ಷಿ ಪೊನ್ನುಂಗ’ (Meenakshi Ponnunga) ಧಾರಾವಾಹಿಯಿಂದ ಹೊರಬಂದಿದ್ದಾರೆ. ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದ ನಟಿ ಈಗ ತಮಿಳು ಸೀರಿಯಲ್ನಿಂದ ಹೊರನಡೆದಿದ್ದಾರೆ.
Advertisement
`ಪಾರು’ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕರಾವಳಿ ಚೆಲುವೆ ಮೋಕ್ಷಿತಾ ಪೈ (Mokshitha Pai) ತಮಿಳಿನ ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ `ಮೀನಾಕ್ಷಿ ಪೊನ್ನುಂಗ’ ಸೀರಿಯಲ್ನ ಮುಖ್ಯ ಪಾತ್ರಧಾರಿ ಶಕ್ತಿಯಾಗಿ ಕಾಣಿಸಿಕೊಂಡಿದ್ದರು. ಈ ಪ್ರಾಜೆಕ್ಟ್ ಮೂಲಕ ತಮಿಳಿನ ಪ್ರೇಕ್ಷಕ ವರ್ಗಕ್ಕೂ ಪಾರು ನಟಿ ಹತ್ತಿರವಾಗಿದ್ದರು. ಆದರೆ ಈಗ ಮೋಕ್ಷಿತಾ, ಈ ಧಾರಾವಾಹಿಯನ್ನ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್
Advertisement
View this post on Instagram
Advertisement
ತಮಿಳು ಸೀರಿಯಲ್ ಮತ್ತು ʻಪಾರುʼ ಧಾರಾವಾಹಿ ಎರಡನ್ನು ನಟಿ ನಿಭಾಯಿಸುತ್ತಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣದಿಂದ ಸೀರಿಯಲ್ನ ಕೈಬಿಟ್ಟಿದ್ದೇನೆ. ಶಕ್ತಿ ಪಾತ್ರ ಮತ್ತು ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದು ನಿಜಕ್ಕೂ ಅದ್ಭುತ ಅನುಭವ ನೀಡಿದೆ. ಶಕ್ತಿ ಪಾತ್ರದಲ್ಲಿ ನನ್ನ ಮೆಚ್ಚಿಕೊಂಡ ಪ್ರೇಕ್ಷಕರಿಗೆ ನನ್ನ ಧನ್ಯವಾದಗಳು ಎಂದು ನಟಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಇನ್ನೂ `ಪಾರು’ ಧಾರಾವಾಹಿ ನನ್ನ ಮೊದಲ ಸೀರಿಯಲ್ ಆಗಿದ್ದು, ಈ ಪ್ರಾಜೆಕ್ಟ್ ನನ್ನ ಆದ್ಯತೆ ಕೂಡ ಎಂದು ನಟಿ ಮೋಕ್ಷಿತಾ ತಿಳಿಸಿದ್ದಾರೆ. ಇನ್ಮುಂದೆ `ಪಾರು’ ಸೀರಿಯಲ್ ಜೊತೆ ಸಿನಿಮಾಗಳತ್ತ ಕೂಡ ಗಮನ ನೀಡುತ್ತೇನೆ ಎಂದು ಮಾತನಾಡಿದ್ದಾರೆ. ಈ ವೇಳೆ `ನಿರ್ಭಯಾ 2′ ಚಿತ್ರದ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದಲ್ಲಿ ನಾನು ನಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯದಲ್ಲೇ ಒಂದೊಳ್ಳೆ ಕಥೆ, ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರುತ್ತೇನೆ ಎಂದು ತಿಳಿಸಿದ್ದಾರೆ.