‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಶೋ 94 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವಾರ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಇಂದು ಮೋಕ್ಷಿತಾ (Mokshitha Pai) ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದ್ದು, ಅಕ್ಕ ತಮ್ಮನ ಭಾವನಾತ್ಮಕ ಕ್ಷಣಗಳನ್ನು ಕಂಡು ಬಿಗ್ ಬಾಸ್ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ.
ಭವ್ಯಾ ಹಾಗೂ ತ್ರಿವಿಕ್ರಮ್ ಕುಟುಂಬದವರು ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದರು. ಇವರ ಬಳಿಕ ರಜತ್ ಅವರ ಕುಟುಂಬ ಆಗಮಿಸಿತ್ತು. ಇದರ ಬೆನ್ನಲ್ಲೇ ಇಂದು ಮನೆಗೆ ಮೋಕ್ಷಿತಾ ಅವರ ಫ್ಯಾಮಿಲಿ ಆಗಮಿಸಿದೆ. ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಂದಿದೆ. ಪೋಷಕರ ಜೊತೆ ಸಹೋದರನ ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್ ತಾಯಿ
ಅಕ್ಕ ಮತ್ತು ತಮ್ಮ ಒಂದಾಗೋ ಭಾವನಾತ್ಮಕ ಘಟಳಿಗೆಯಲ್ಲಿ ಇಡೀ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ. ವಿಶೇಷ ಚೇತನ ಸಹೋದರನನ್ನು ನೋಡಿದ ತಕ್ಷಣ ಮೋಕ್ಷಿತಾ ಅಳುತ್ತಾ ಓಡೋಡಿ ಬಂದರು. ಇಷ್ಟು ದಿನ ಬಿಟ್ಟು ಇದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಮರೆತು ಹೋಗಿಬಿಟ್ಟಿದ್ದಾನೆ ಎಂದು ತಮ್ಮನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಸುರಿಸಿದ್ದಾರೆ. ಅವನು ನನ್ನಾ ನೋಡ್ತಾನೇ ಇಲ್ಲ. ನನ್ನನ್ನು ಮರೆತು ಬಿಟ್ಟಿದ್ದಾರೆ ಎಂದು ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈ ಚಿಕ್ಕ ಕುಟುಂಬವನ್ನು ನೋಡಿದ ರಜತ್, ಹನುಮಂತು, ಮಂಜು, ಚೈತ್ರಾ, ಗೌತಮಿ, ತ್ರಿವಿಕ್ರಮ್, ಭವ್ಯಾ ಎಲ್ಲರೂ ಫುಲ್ ಸೈಲೆಂಟ್ ಆಗಿದ್ದರು. ಮೋಕ್ಷಿತಾ ಅಳುವುದನ್ನು ನೋಡಿ ತಡೆಯಲಾಗದೇ ಗೌತಮಿ ಕೂಡ ಅತ್ತಿದ್ದಾರೆ. ಸಹೋದರನ ಜೊತೆಗಿನ ಭಾವನಾತ್ಮಕ ಕ್ಷಣ ನೋಡಿ ಇಡೀ ಮನೆಯೇ ದುಃಖದಲ್ಲಿ ಮುಳುಗಿದೆ. ಮೋಕ್ಷಿತಾ ಕಣ್ಣೀರಿಗೆ ಪ್ರೇಕ್ಷಕರ ಕರುಳು ಕಿವುಚಿದೆ.