ಬಿಗ್ ಬಾಸ್ ಮನೆಯ ಆಟ (Bigg Boss Kannada 11) ಇನ್ನೇನು 2 ವಾರಗಳಲ್ಲಿ ಮುಗಿಯಲಿದೆ. ಜ.26ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇನ್ನೂ ಚೈತ್ರಾ ಕುಂದಾಪುರ ಎಲಿಮಿನೇಷನ್ ಬಳಿಕ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ. ತಮ್ಮ ಉಳಿವಿಕೆಗಾಗಿ ಗುದ್ದಾಟ ಶುರುವಾಗಿದೆ. ಇನ್ನೂ ಈ ವಾರ ಮೀಡ್ ವೀಕ್ ಎಲಿಮಿನೇಷನ್ ಇರೋದ್ರಿಂದ ಇದರಿಂದ ಪಾರಾಗಲು ರಜತ್‌ಗೆ ಮೋಕ್ಷಿತಾ ಹಾಗೂ ಭವ್ಯಾ ಸ್ಕೆಚ್ ಹಾಕಿದ್ದಾರೆ.
ಇಂದಿನ ಪ್ರೋಮೋದಲ್ಲಿ ವಾರದ ಮಧ್ಯೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಒಬ್ಬರು ಮನೆಯಿಂದ ಹೋಗೋದು ಖಚಿತ ಎಂದು ಘೋಷಿಸಿದ್ದಾರೆ. ಈ ವಾರದ ಟಾಸ್ಕ್ ಗೆಲ್ಲುವ ಒಬ್ಬ ಸದಸ್ಯ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗುತ್ತಾರೆ ಎಂದು ತಿಳಿಸಿದ್ದಾರೆ. ಆ ನಂತರ ಟಾಸ್ಕ್ ವೇಳೆ, ರಜತ್‌ರನ್ನ ಮನೆಯಿಂದ ಹೊರ ಕಳುಹಿಸಲು ಮೋಕ್ಷಿತಾ ಮತ್ತು ಭವ್ಯಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:BBK 11: ಕೊರಗಜ್ಜನ ಪವಾಡದಿಂದ ಸೇಫ್ ಆದ ಧನರಾಜ್- ಫೈರ್ ಬ್ರ್ಯಾಂಡ್ ಚೈತ್ರಾ ಔಟ್
Advertisement
Advertisement
ಹೆಚ್ಚು ಮರದ ತುಂಡುಗಳನ್ನು ನೆಟ್‌ನಲ್ಲಿ ಹೊಂದಿರುವ ಸದಸ್ಯ ಟಾಸ್ಕ್‌ನಿಂದ ಔಟ್ ಆಗಲಿದ್ದಾರೆ ಎಂಬುದು ಆಟದ ನಿಯಮವಾಗಿತ್ತು. ಅದರಂತೆ ರಜತ್ ಫೋಟೋವಿದ್ದ ಬುಟ್ಟಿಗೆ ಮರದ ತುಂಡುಗಳನ್ನು ಭವ್ಯಾ ಹಾಗೂ ಮೋಕ್ಷಿತಾ ಹಾಕಲು ಪ್ರಯತ್ನಿಸಿದ್ದಾರೆ. ಇನ್ನೂ ತನ್ನನ್ನು ಔಟ್ ಮಾಡಲು ಭವ್ಯಾ ಮತ್ತು ಮೋಕ್ಷಿತಾ ಮ್ಯಾಚ್ ಫಿಕ್ಸಿಂಗ್ ಬಗ್ಗೆ ರಜತ್ ಅರಿವಿಗೆ ಬಂದಿದ್ದು, ಅವರು ರಾಂಗ್ ಆಗಿದ್ದಾರೆ. ನಿಮ್ಮಿಬ್ಬರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
Advertisement
View this post on Instagram
Advertisement
ಟಿಕೆಟ್ ಟು ಫಿನಾಲೆ ಹೋಗಬಾರದು ಅಂತ ಭವ್ಯಾ ಹೆಸರನ್ನು ನೀವು ತೆಗೆದುಕೊಳ್ಳೀರಿ, ಈಗ ನಾಮಿನೇಷನ್‌ನಿಂದ ಉಳಿಯಬೇಕು ಅಂತ ಭವ್ಯಾ ಜೊತೆ ಸೇರಿಕೊಳ್ತೀರಾ ಅಂತ ಮೋಕ್ಷಿತಾಗೆ ತ್ರಿವಿಕ್ರಮ್ ಟಾಂಗ್ ಕೊಟ್ಟಿದ್ದಾರೆ. ನಾವು ನಿಯತ್ತಾಗಿ ಆಟ ಆಡಿದ್ದೇವೆ ಎಂದ ಮೋಕ್ಷಿತಾಗೆ ಸಮರ್ಥನೆ ಬೇಡ ಅಂತ ರಜತ್ ತಿರುಗೇಟು ನೀಡಿದ್ದಾರೆ. ಇನ್ನೂ ಭವ್ಯಾಗೆ ಅನೇಕ ಬಾರಿ ರಜತ್ ಕಿವಿಮಾತು ಹೇಳಿದ್ದು ಇದೆ. ಆದರೆ, ಈಗ ಆಟದಲ್ಲಿ ಭವ್ಯಾ ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದಾರೆ. ಅವರಿಗೆ ಬೇಸರವೂ ಉಂಟಾಗಿದೆ.
ಭವ್ಯಾ, ಮೋಕ್ಷಿತಾ, ರಜತ್, ಧನರಾಜ್, ಉಗ್ರಂ ಮಂಜು, ತ್ರಿವಿಕ್ರಮ್, ಗೌತಮಿ ಈ ಸ್ಪರ್ಧಿಗಳಲ್ಲಿ ಫಿನಾಲೆಗೆ ಹೋಗಲು ಫೈಟ್ ನಡೆಯುತ್ತಿದೆ. ಇದೆಲ್ಲದರ ನಡುವೆ ಮಿಡ್ ವೀಕ್ ಎಲಿಮಿನೇಷನ್‌ನಿಂದ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.