ಮುಂಬೈ: ಬಿಸಿಸಿಐ ಮುಂದೆ ಕೊನೆಗೂ ಪಾಕ್ ಸಚಿವ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಮಂಡಿಯೂರಿದ್ದಾರೆ. ಏಷ್ಯಾ ಕಪ್ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ವಾಪಸ್ ಕೊಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ (Asia Cup) ಟ್ರೋಪಿ ಜಯಿಸಿತು. ಆದರೆ, ಪಾಕ್ ಸಚಿವ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಈ ವೇಳೆ, ಟ್ರೋಫಿ ಕೊಡದೇ ಪಾಕ್ ಸಚಿವ ಉದ್ಧಟತನ ತೋರಿದರು. ಈ ಬೆಳವಣಿಗೆ ಸಾಕಷ್ಟು ವಿವಾದ ಸೃಷ್ಟಿಸಿತು. ಇದನ್ನೂ ಓದಿ: ಪಾಕ್ ಸಚಿವನಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ
ಏಷ್ಯಾ ಕಪ್ ಟ್ರೋಫಿ ಕಳ್ಳತನ ಮಾಡಿದ್ದಾರೆಂಬ ಅಪವಾದವನ್ನೂ ನಖ್ವಿ ಹೊತ್ತುಕೊಂಡರು. ಟ್ರೋಫಿಯನ್ನು ಟೀಂ ಇಂಡಿಯಾ ಕ್ಯಾಪ್ಟನ್ ಕಚೇರಿಗೆ ಬಂದು ತೆಗೆದುಕೊಂಡು ಹೋಗಬಹುದು ಎಂಬಂತಹ ದರ್ಪದ ಮಾತುಗಳನ್ನು ಆಡಿದ್ದರು.
ನಖ್ವಿ ನಡೆಯನ್ನು ಖಂಡಿಸಿದ ಬಿಸಿಸಿಐ, ಪಾಕ್ ಜೊತೆಗೆ ಕ್ರಿಕೆಟ್ ಪಂದ್ಯವಾಡುವ ಯಾವ ತಂಡದ ಜೊತೆಗೂ ಭಾರತದ ತಂಡ ಆಟವಾಡಲ್ಲ ಎಂದು ಖಡಕ್ ಸಂದೇಶ ರವಾನಿಸಿತು. ಬಿಸಿಸಿಐನಿಂದ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಕದ್ದೊಯ್ದಿದ್ದ ಕಪ್‌ನ್ನು ನಖ್ವಿ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಚೆಕ್ ಹರಿದು ಎಸೆದ ಪಾಕ್ ಕ್ಯಾಪ್ಟನ್ ದುರಹಂಕಾರ – ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!
ನವೆಂಬರ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ದೂರು ಸಲ್ಲಿಸುವುದಾಗಿ ಭಾರತ ಬೆದರಿಕೆ ಹಾಕಿತ್ತು. ‘ಟ್ರೋಫಿ ಮತ್ತು ಪದಕಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಹಕ್ಕನ್ನು ನೀಡುವುದಿಲ್ಲ. ಇದು ಅತ್ಯಂತ ದುರದೃಷ್ಟಕರ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಬಿಸಿಸಿಐ ತಿಳಿಸಿತ್ತು.