ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮೊಯಿದ್ದಿನ್ ಬಾವಾ (Mohiuddin Bava) ಗಂಭೀರವಾಗಿ ಆರೋಪಿಸಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನಾಯತ್ ಆಲಿಗೆ ಟಿಕೆಟ್ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಸರ್ವೆಯಲ್ಲಿ ಶೇ. 78 ನನ್ನ ಪರವಾಗಿ ಮತಗಳು ಬಂದಿದ್ದವು. ಇನಾಯತ್ ಆಲಿಗೆ ಕೇವಲ 7 ಶೇ. ಮತ ಸಿಕ್ಕಿದ್ದರೂ, ಡಿಕೆಶಿಯ ಪಾಲುದಾರ ಎಂಬ ನೆಪದಲ್ಲಿ ಟಿಕೆಟ್ ಮಾರಿದ್ದಾರೆ. ನನ್ನ ಟಿಕೆಟ್ ತಪ್ಪಿಸಿದ್ದು ಡಿಕೆ ಶಿವಕುಮಾರ್ ಅವರೇ, ಖಚಿತವಾಗಿ ಹೇಳುತ್ತೇನೆ. ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಸ್ಟ್ ಒಂದು ಕರೆಯಿಂದ ಟಿಕೆಟ್ ಕಳೆದುಕೊಂಡ ಮೊಯಿದ್ದಿನ್ ಬಾವಾ!
ಡಿಕೆಶಿ ನೀರಾವರಿ ಸಚಿವನಾದ ಬಳಿಕ ಇನಾಯತ್ ಅಲಿ ಹಣ ಮಾಡಿದ್ದಾನೆ ಎಂಬುದು ಗೊತ್ತಿದೆ. ಇನಾಯತ್ ಅಲಿ ಯಾರೆಂದೇ ಕ್ಷೇತ್ರದಲ್ಲಿ ಜನರಿಗೆ ಗೊತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತರಿಗೂ ಗೊತ್ತಿಲ್ಲ ಎಂದು ಗುಡುಗಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಜಿನಾಮೆ ನೀಡಿ ಜೆಡಿಎಸ್ ಸೇರುತ್ತೇನೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇನಾಯತ್ ಗೆದ್ದರೆ ನನ್ನ ತಲೆ ಕಡಿದು ಕೊಡಲು ಸಿದ್ಧನಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ
ಸಿದ್ದರಾಮಯ್ಯ (Siddaramaiah) ಬಣದ ಮೊಯಿದ್ದಿನ್ ಬಾವಾ ಮತ್ತು ಡಿಕೆ ಶಿವಕುಮಾರ್ (DK Shivakumar) ಬಣದ ಇನಾಯತ್ ಅಲಿ (Inayat Ali) ಮಧ್ಯೆ ಮಂಗಳೂರು ಉತ್ತರ (Mangalore North) ಕ್ಷೇತ್ರದ ಟಿಕೆಟ್‌ಗೆ ಭಾರೀ ಫೈಟ್ ನಡೆಯುತ್ತಿತ್ತು. ಬಹುತೇಕ ಮಾಜಿ ಶಾಸಕ ಮೊಯಿದ್ದಿನ್ ಬಾವಾಗೆ ಟಿಕೆಟ್ ಫೈನಲ್ ಆಗಿತ್ತು. ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲೇ ಬಾವಾ ಹೆಸರು ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಡಿಕೆ ಬಣದ ಇನಾಯತ್ ಅಲಿಗೆ ಸಿಕ್ಕಿದೆ.