ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರ ತಾಯಿ ಶಾಂತಕುಮಾರಿ (Santhakumari) ಅವರು ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬದ ನಿವಾಸದಲ್ಲಿ ನಿಧನರಾದರು.
ಶಾಂತಕುಮಾರಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೂಲತಃ ಪತ್ತನಂತಿಟ್ಟದ ಎಳಂತೂರಿನವರಾದ ಅವರು ತಮ್ಮ ಪತಿ ವಿಶ್ವನಾಥನ್ ನಾಯರ್ ಜೊತೆ ತಿರುವನಂತರಪುರದಲ್ಲಿ ನೆಲೆಸಿದ್ದರು. ಪಾರ್ಶ್ವವಾಯುವಿಗೆ ಒಳಗಾದ ನಂತರ ಮೋಹನ್‌ಲಾಲ್ ತಮ್ಮ ತಾಯಿಯನ್ನು ಕೊಚ್ಚಿಗೆ ಕರೆತಂದಿದ್ದರು. ಇದನ್ನೂ ಓದಿ: ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು
ಆಗಸ್ಟ್ 10 ರಂದು ಕೊಚ್ಚಿಯಲ್ಲೇ ತಮ್ಮ 90ನೇ ಹುಟ್ಟುಹಬ್ಬವನ್ನು ಮೋಹಲ್‌ಲಾಲ್ ತಾಯಿ ಆಚರಿಸಿಕೊಂಡಿದ್ದರು. ಶಾಂತಕುಮಾರಿ ಅವರ ಹಿರಿಯ ಮಗ ಪ್ಯಾರೇಲಾಲ್ 2000 ರಲ್ಲಿ ನಿಧನರಾದರು.
ಮೋಹನ್‌ಲಾಲ್ ಅವರ ಚಲನಚಿತ್ರ ವೃತ್ತಿಜೀವನದ ಮೇಲೆ ಶಾಂತಕುಮಾರಿ ಗಮನಾರ್ಹ ಪ್ರಭಾವ ಬೀರಿದ್ದಾರೆ. ಇದನ್ನು ನಟ ಹಲವಾರು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ, ಮೋಹನ್‌ಲಾಲ್ ಅವರು, ನನ್ನ ತಾಯಿಯೊಂದಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಂಚಿಕೊಳ್ಳಲು ಸಾಧ್ಯವಾಗಿದ್ದು ದೊಡ್ಡ ಅದೃಷ್ಟ ಎಂದು ಹೇಳಿಕೊಂಡಿದ್ದರು. ಪ್ರಶಸ್ತಿ ಪಡೆದ ಬಳಿಕ ನಟ ಮೊದಲು ತನ್ನ ತಾಯಿಯನ್ನೇ ಭೇಟಿಯಾಗಿದ್ದರು.
ಮೋಹನ್‌ಲಾಲ್ ತನ್ನ ತಾಯಿಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಸಿನಿಮಾ ಕೆಲಸಗಳು, ಬಿಡುವಿಲ್ಲದ ಸಮಯದ ಹೊರತಾಗಿಯೂ ತನ್ನ ತಾಯಿಯನ್ನು ನೋಡಿಕೊಳ್ಳಲು ನಟ ಸಮಯ ಮೀಸಲಿಡುತ್ತಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡಿಕೊಂಡ ರಕ್ಷಿತಾ-ಸ್ಪಂದನಾ; ಮಾಳು ಹೊರಹೋಗೋದಕ್ಕೆ ಕಾರಣ ಯಾರು?

