ಈ ಹಿಂದೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದಾಗ ಅವರ ಮನೆಯಲ್ಲಿ ಎರಡು ಜೊತೆ ಆನೆದಂತ ಮತ್ತು ಆನೆದಂತದಿಂದ ಮಾಡಿದ ವಸ್ತುಗಳು ಪತ್ತೆ ಆಗಿದ್ದವು. ಹಾಗಾಗಿ ಅರಣ್ಯ ಇಲಾಖೆಯು ಮೋಹನ್ ಲಾಲ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಲಾಲ್ ಅವರಿಗೆ ಇಲಾಖೆಯು ಮಾಲೀಕತ್ವ ದಾಖಲೆ ನೀಡಿದ್ದರಿಂದ ಪ್ರಕರಣ ಕೈ ಬಿಡಬೇಕೆಂದು ಸರಕಾರವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
Advertisement
ಆನೆ ದಂತಗಳಿಗೆ ನೀಡಿರುವ ಮಾಲೀಕತ್ವ ಪ್ರಮಾಣ ಪತ್ರಕ್ಕೆ ಮಾನ್ಯತೆ ಇಲ್ಲ ಎಂದು ವಾದಿಸಿದ ಅರ್ಜಿ ವಿರುದ್ಧದ ವಕೀಲರು, ಎರಡು ಆನೆದಂತ ಮತ್ತು ಆನೆದಂತದಿಂದ ಮಾಡಿದ 13 ಕಲಾಕೃತಿಗಳ ಕುರಿತು ಯಾವುದೇ ಕ್ರಮ ತಗೆದುಕೊಂಡಿಲ್ಲವೆಂದು ವಾದಿಸಿತು. ಹಾಗಾಗಿ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಮೋಹನ್ ಲಾಲ್ ವಿರುದ್ಧದ ಪ್ರಕರಣ ಈ ಮೂಲಕ ಮುಂದುವರೆದಿದೆ. ಇದನ್ನೂ ಓದಿ: ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ
Advertisement
Advertisement
ಕೇಸು ಮುಂದುವರೆದು, ಒಂದು ವೇಳೆ ಆರೋಪ ಸಾಬೀತಾದರೆ, ಅರಣ್ಯ ಕಾಯ್ದೆಯಡಿ ಏಳು ವರ್ಷಗಳು ಮೀರದಂತೆ ಜೈಲು ಶಿಕ್ಷೆಯಿದೆ. ಹಾಗಾಗಿ ಮೋಹನ್ ಲಾಲ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಅವರು ಈ ಪ್ರಕರಣವನ್ನು ಎದುರಿಸಲೇಬೇಕಾಗಿದೆ. ಮತ್ತೆ ಮೋಹನ್ ಲಾಲ್ ವಿಚಾರಣೆಗೆ ಸಹಕರಿಸಬೇಕಾಗಿದೆ. ಸಿನಿಮಾ ಮತ್ತು ಉದ್ಯಮ ಎರಡೂ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿರುವ ಮೋಹನ್ ಲಾಲ್ ಈ ವಿಷಯದಲ್ಲಿ ಗೆಲ್ಲಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆ.