ಮಾಲಿವುಡ್ (Mollywood) ಸೂಪರ್ ಸ್ಟಾರ್ ಮೋಹನ್ ಲಾಲ್ (Mohan Lal) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ನಟನ ಬಗ್ಗೆ ಹೊಸ ವಿಷ್ಯವೊಂದು ಸಖತ್ ಚರ್ಚೆ ಆಗುತ್ತಿದೆ. ರಾಜಕೀಯ ಅಖಾಡಕ್ಕೆ ಮೋಹನ್ ಲಾಲ್ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ಇದೀಗ ಸ್ವತಃ ಮೋಹನ್ ಲಾಲ್ ಸ್ಪಷ್ಟನೆ ನೀಡಿದ್ದಾರೆ.
ಸಾಕಷ್ಟು ಸಿನಿಮಾಗಳ ಮೂಲಕ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚ್ತಿರುವ ಮೋಹನ್ ಲಾಲ್ ಈಗ ರಾಜಕೀಯ ಕ್ಷೇತ್ರದಲ್ಲೂ ಮಿಂಚಲು ಸಜ್ಜಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ನಟ ಸ್ಪಷ್ಟನೆ ನೀಡಿದ್ದಾರೆ. ನನಗೆ ರಾಜಕೀಯಕ್ಕೆ ಬರಲ್ಲ, ಅದು ನನ್ನ ಕ್ಷೇತ್ರವಲ್ಲ. ರಾಜಕೀಯಕ್ಕೆ (Politics) ಸೇರುವ ಬಗ್ಗೆ ಯಾವುದೇ ಗುರಿ ನನಗಿಲ್ಲ ಎಂದು ಹೇಳುವ ಮೂಲಕ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ:ನಾಯಕಿ ರುಕ್ಮಿಣಿ ಜೊತೆ ಆಫ್ರಿಕಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್ ಗಣೇಶ್
ನಾನು ಯಾವುದೇ ಒಂದು ಪಕ್ಷ ಸೇರಿದರೆ, ಆ ಪಕ್ಷಕ್ಕೆ ಮಾತ್ರ ಸೀಮಿತವಾಗಿರಬೇಕು. ಆದರೆ ಈಗ ಹಾಗಲ್ಲ. ನಮ್ಮ ಯೋಚನೆಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು ಎಂದು ಮಾತನಾಡಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಬರುವ ಎಲ್ಲಾ ಊಹಾಪೋಹಗಳಿಗೂ ನಟ ಸ್ಪಷನೆ ನೀಡಿದ್ದಾರೆ. ಮೋಹನ್ ಲಾಲ್ ಅವರು ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.