ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಹಾಗೂ ಖ್ಯಾತ ನಿರ್ದೇಶಕ ಜೀತು ಜೋಸೆಫ್ (Jeethu Joseph), ಬ್ಲಾಕ್‌ಬಸ್ಟರ್ ಕ್ರೈಮ್ ಥ್ರಿಲ್ಲರ್ ಸಿನಿಮಾದ 3ನೇ ಭಾಗಕ್ಕೆ ಕೈಜೋಡಿಸಿದ್ದಾರೆ.
View this post on Instagram
Advertisement
ಹೌದು. ದೃಶ್ಯಂ 3 (Drishyam 3) ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಫೆಬ್ರವರಿ 20 ರಂದು ನಿರ್ದೇಶಕ ಜೀತು ಜೋಸೆಫ್ ಮತ್ತು ನಿರ್ಮಾಪಕ ಆಂಥೋನಿ ಪೆರುಂಬವೂರ್ ಅವರೊಂದಿಗೆ ಫೋಟೋ ಹಂಚಿಕೊಳ್ಳುವ ಮೂಲಕ ಮೋಹನ್ ಲಾಲ್ ತಮ್ಮ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
Advertisement
ಈ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟ ಮೋಹನ್ ಲಾಲ್, ʻಪಾಸ್ಟ್ ಎಂದಿಗೂ ಮೌನವಾಗಿರುವುದಿಲ್ಲ. ದೃಶ್ಯಂ 3 ಕನ್ಫರ್ಮ್ʼ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಪೋಸ್ಟ್ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ʻವಾಹ್, ಬಿಗ್ಗೆಸ್ಟ್ ಬ್ರ್ಯಾಂಡ್ ಸೀಕ್ವೆಲ್ ಈಸ್ ಬ್ಯಾಕ್ (ಫೈಯರ್ ಎಮೋಜಿಯೊಂದಿಗೆ)ʼ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಮಲಯಾಳಂ ಭಾಷೆಯಲ್ಲಿ ತೆರೆ ಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ದೃಶ್ಯಂ 1, 2 ಸಿನಿಮಾ ಬೇರೆ ಭಾಷೆಗಳಿಗೂ ರಿಮೇಕ್ ಆಗಿತ್ತು. ಇದೀಗ ಬಾಗ-2 ಯಶಸ್ಸಿನ ಬೆನ್ನಲ್ಲೇ 3ನೇ ಭಾಗವನ್ನ ಬೆಳ್ಳಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.