ನಟ ಮೋಹನ್‌ಲಾಲ್ (Mohanlal) ಅವರು 65ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ನಟನ ಬರ್ತ್‌ಡೇ ‘ಕಣ್ಣಪ್ಪ’ (Kannappa) ಚಿತ್ರದ ಪೋಸ್ಟರ್ ರಿವೀಲ್ ಮಾಡಿ ವಿಶೇಷವಾಗಿ ಚಿತ್ರತಂಡ ಶುಭಕೋರಿದೆ. ಇದನ್ನೂ ಓದಿ:ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ

ತೆಲುಗು ನಟ ಮೋಹನ್ ಬಾಬು ‘ಕಣ್ಣಪ್ಪ’ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮಂಚು ವಿಷ್ಣು ಜೊತೆ ಮೋಹನ್ ಲಾಲ್, ಅಕ್ಷಯ್ ಕುಮಾರ್, ಮಗಧೀರ ನಟಿ ಕಾಜಲ್, ಪ್ರಭಾಸ್, ಕನ್ನಡದ ನಟ ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಈ ಚಿತ್ರವು ಬಹುಭಾಷೆಗಳಲ್ಲಿ ಜೂನ್ 27ರಂದು ರಿಲೀಸ್ ಆಗಲಿದೆ. ಮಲ್ಟಿ ಸ್ಟಾರ್‌ಗಳು ನಟಿಸಿರುವ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.


