ಬೆಂಗಳೂರು: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆಗೆ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ತಿರುಗೇಟು ಕೊಟ್ಟಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋಹನ್ ದಾಸ್ ಪೈ ಅವರು, ಇದೊಂದು ದೊಡ್ಡ ಸುಳ್ಳು ಮತ್ತು ಕೆಟ್ಟ ಜೋಕ್ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೀನಿ: ಕೆ.ಎನ್ ರಾಜಣ್ಣ
ಬೆಂಗಳೂರು ಹೊರತುಪಡಿಸಿದ್ರೇ ಎರಡನೇ ದೊಡ್ಡ ಆದಾಯದ ಮೂಲ ದಕ್ಷಿಣ ಕನ್ನಡ. 30,000 ಹೆಚ್ಚಿನ ವಿದ್ಯಾರ್ಥಿಗಳು ಬೇರೆ ರಾಜ್ಯ ನಗರದಿಂದ ವೈದ್ಯಕೀಯ ಎಂಜಿನಿಯರಿಂಗ್ ಕಲಿಯಲು ಇಲ್ಲಿಗೆ ಬರುತ್ತಾರೆ. ನೀವು ಹೇಳಿದ್ದೆ ಸರಿಯಾಗಿದ್ರೇ ಯಾಕೆ ಹೆತ್ತವರು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಕಳಿಸುತ್ತಿದ್ರು ಎಂದು ಖರ್ಗೆಗೆ ಉದ್ಯಮಿ ಪೈ ಪ್ರಶ್ನಿಸಿದ್ದಾರೆ.
ಸಚಿವರಾಗಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವು ನಮ್ಮನ್ನು ಅತ್ಯಂತ ತುಚ್ಛವಾಗಿ ನೋಡಿದ್ರಿ ಅಂತಾ ಕರಾವಳಿ ಮೂಲದ ಉದ್ಯಮಿ ಪೈ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಾ.6 ರಂದು ಬಜೆಟ್ – ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ
ಇದಕ್ಕೆ ಮತ್ತೆ ಎಕ್ಸ್‌ನಲ್ಲಿ ಖರ್ಗೆ ತಿರುಗೇಟು ಕೊಟ್ಟಿದ್ದು, ಸಮಸ್ಯೆಗಳ ಬಗ್ಗೆ ಕುರುಡಾಗಿದ್ರೇ ಹೀಗೆಯೇ ಆಗುತ್ತೆ. ರಾಜ್ಯದ 40% ಜಿಡಿಪಿಯನ್ನು ಬೆಂಗಳೂರು ಕೊಡುತ್ತೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ 5.4% ಅನ್ನು ಕೊಡುಗೆ ಕೊಡುತ್ತೆ. ಇದರಲ್ಲಿಯೇ ವ್ಯತ್ಯಾಸ ತಿಳಿಯೋದಿಲ್ವೇ? ನಾನು ಹೇಳೋದು ಸುಳ್ಳಾಗಿದ್ರೆ ಅಲ್ಲಿನ ಸ್ಥಳೀಯ ಕಾಮರ್ಸ್ ವಿಭಾಗ ಈ ಬಗ್ಗೆ ಚರ್ಚೆ ಯಾಕೆ ಮಾಡುತ್ತೆ? ನಮ್ಮ ಸರ್ಕಾರ ಕರಾವಳಿ ಅಭಿವೃದ್ಧಿಯ ಬಗ್ಗೆ ಜವಾಬ್ದಾರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

