ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ (Mohan Bhagwat) ಅವರು ಮೈಸೂರು ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕಿಂದು (Shri Gaali Anjaneya Swami Temple) ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು. ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಕ್ಷೇತ್ರೀಯ ಪ್ರಚಾರಕ್ ಭರತ್ ಕುಮಾರ್ ಉಪಸ್ಥಿತರಿದ್ದರು. ಇದನ್ನೂ ಓದಿ: ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್
ರಾಷ್ಟೀಯ ಸ್ವಯಂಸೇವಕ ಸಂಘವು (RSS) ಕಳೆದ ವಿಜಯದಶಮಿಯಂದು (ಅಕ್ಟೋಬರ್ 2, 2025) ತನ್ನ 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಶತಾಬ್ದಿ ವರ್ಷದಲ್ಲಿ ವಿಜಯದಶಮಿ ಉತ್ಸವಗಳು, ಯುವ ಸಮಾವೇಶ, ಮನೆಮನೆ ಸಂಪರ್ಕ, ಹಿಂದೂ ಸಮ್ಮೇಳನ, ಸಾಮಾಜಿಕ ಸದ್ಭಾವನಾ ಸಮಾವೇಶ, ಪ್ರಮುಖ ನಾಗರಿಕರ ವಿಚಾರಗೋಷ್ಠಿ ಮುಂತಾದ ವಿವಿಧ ಚಟುವಟಿಕೆಗಳನ್ನು ದೇಶಾದ್ಯಂತ ಹಮ್ಮಿಕೊಳ್ಳುತ್ತಾ ಬರುತ್ತಿದೆ.
ಇದರ ಮುಂದುವರಿದ ಹಾದಿಯಾಗಿ ಬೆಂಗಳೂರಿನಲ್ಲಿ ನವೆಂಬರ್ 8 ಮತ್ತು 9ರಂದು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಾ.ಮೋಹನ್ ಭಾಗವತ್ ಮಾತನಾಡಲಿದ್ದಾರೆ. ಈ ಹಿನ್ನೆಲೆ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ-ಆರ್‌ಎಸ್‌ಎಸ್ ನಡ್ವೆ ಕೆಲ ಭಿನ್ನಾಭಿಪ್ರಾಯ ಇರಬಹುದು, ಎಲ್ಲಿಯೂ ಸಂಘರ್ಷವಿಲ್ಲ: ಮೋಹನ್ ಭಾಗವತ್
ಶತಮಾನೋತ್ಸವ ಸಂಭ್ರಮದಲ್ಲಿರುವ ಸ್ವಯಂಸೇವಕ ಸಂಘವು ದೇಶದ 4 ಕಡೆಗಳಲ್ಲಿ (ನವದೆಹಲಿ, ಬೆಂಗಳೂರು, ಮುಂಬಯಿ ಮತ್ತು ಕೊಲ್ಕತ್ತಾ) ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ (100 Years of Sangh Journey: New Horizons) ಎಂಬ ಶೀರ್ಷಿಕೆಯಲ್ಲಿ ಉಪನ್ಯಾಸ ನಡೆಸಿಕೊಡುತ್ತಿದ್ದು, ಮೋಹನ್ ಭಾಗವತ್ ಅವರು ಉಪನ್ಯಾಸ ನೀಡಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಮೊದಲ ಉಪನ್ಯಾಸಮಾಲೆ ಯಶಸ್ವಿಯಾಗಿದೆ.



