ಭೋಪಾಲ್: ಹಿಂದೂಗಳಿಲ್ಲದೆ ಭಾರತವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಹಿಂದೂಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಭಾರತವು ಸಂಸ್ಕೃತಿ, ಆಚಾರ-ವಿಚಾರದಲ್ಲಿ ಸ್ವಂತಿಕೆಯನ್ನು ಹೊಂದಿದೆ. ಅದು ಹಿಂದುತ್ವದ ಸಾರವಾಗಿದೆ. ಹೀಗಾಗಿ ಭಾರತ ಹಿಂದೂಗಳ ದೇಶವಾಗಿದೆ ಎಂದು ಭಾಗವತ್ ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ವಾರದಲ್ಲಿ ಮೂರನೇ ಬಾರಿ ಗೌತಮ್ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ
ಭಾರತ-ಪಾಕಿಸ್ತಾನ ವಿಭಜನೆ ಕುರಿತು ಮಾತನಾಡಿದ ಅವರು, ನಾವು ಹಿಂದೂಗಳು ಎಂಬುದನ್ನು ಮರೆತಿದ್ದೆವು. ಪರಿಣಾಮವಾಗಿಯೇ ಭಾರತ-ಪಾಕಿಸ್ತಾನ ಎಂದು ವಿಭಜನೆಯಾಯಿತು. ನಾವು ಭಾರತೀಯರು ಎಂಬುದನ್ನು ಮುಸ್ಲಿಮರು ಸಹ ಮರೆತಿದ್ದರು. ಮನಃಪೂರ್ವಕವಾಗಿ ನಾನು ಹಿಂದೂ ಎಂದು ಹೇಳಿಕೊಳ್ಳುವವರ ಸಂಖ್ಯೆ ಆಗ ಕಡಿಮೆ ಇದ್ದದ್ದರಿಂದ ಭಾರತದೊಂದಿಗೆ ಪಾಕಿಸ್ತಾನ ಹೆಚ್ಚು ದಿನ ಉಳಿಯಲಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಹಿಂದೂಗಳ ಸಂಖ್ಯೆ ಕ್ಷೀಣಿಸಿದೆ. ಭಾರತೀಯರಲ್ಲಿ ಹಿಂದುತ್ವದ ಭಾವನೆಯೂ ಕುಸಿಯುತ್ತಿದೆ. ಹಿಂದೂಗಳು ಹಿಂದೂಗಳಾಗಿಯೇ ಉಳಿದರೆ ಭಾರತವು ಅಖಂಡವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ: ಹಂಸಲೇಖ
ವಿಭಜನೆಯ ಸಮಯದಲ್ಲಿ ಭಾರತ ಅನುಭವಿಸಿದ ನೋವನ್ನು ಮರೆಯಲಾಗದು. ವಿಭಜನೆಯನ್ನು ರದ್ದುಗೊಳಿಸಿದಾಗ ಮಾತ್ರ ಆ ನೋವು ಕಡಿಮೆಯಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.