ರಾಯ್ಪುರ: ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ, ಹೇಗೆ ಬದುಕಬೇಕೆಂಬುದನ್ನು ಕಲಿಸಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಛತ್ತೀಸ್‍ಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ. ಆದರೆ ಹೇಗೆ ಬದುಕಬೇಕೆಂದು ಕಲಿಸಬೇಕಿದೆ. ಇಡೀ ಜಗತ್ತಿಗೆ ಈ ಕುರಿತು ಪಾಠವನ್ನು ಹೇಳಲು ನಾವು ಭಾರತದಲ್ಲಿ ಹುಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!
Advertisement
Advertisement
ಇತ್ತೀಚೆಗೆ ಗುಜರಾತ್‍ನ ಭರೂಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನರನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ 4 ಜನರನ್ನು ಬಂಧಿಸಲಾಗಿತ್ತು. ಉತ್ತಮ ಉದ್ಯೋಗ ನೀಡುವ ಭರವಸೆ ನೀಡಿ ತಮ್ಮನ್ನು ಮತಾಂತರಗೊಳಿಸಿದ್ದ ಆರೋಪದಲ್ಲಿ 9 ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಗುಜರಾತ್‍ನಲ್ಲಿ ಸುಮಾರು 35 ಕುಟುಂಬಗಳ ಸುಮಾರು 100 ಜನರನ್ನು ಹಣದ ಆಮಿಷವೊಡ್ಡಿ ಬಲವಂತವಾಗಿ ಮತಾಂತರಗೊಳಿಸಲಾಗಿತ್ತು. ಇದನ್ನೂ ಓದಿ: ಶ್ರೀಕೃಷ್ಣನ ಮೂರ್ತಿ ಕೈ ತುಂಡಾಗಿದೆ- ಆಸ್ಪತ್ರೆಗೆ ತಂದ ಅರ್ಚಕ
ಜಗತ್ತಿಗೆ ಯಾವ ರೀತಿ ಆದರ್ಶವಾಗಿ ಬದುಕಬೇಕೆಂದು ತಿಳಿಸಲು ನಾವು ಭಾರತದ ಭೂಮಿಯಲ್ಲಿ ಹುಟ್ಟಿದ್ದೇವೆ. ನಮ್ಮ ಪಂಗಡವು ಯಾರ ಪೂಜಾ ಪದ್ಧತಿಯನ್ನೂ ಬದಲಾಯಿಸದೆ ಒಳ್ಳೆಯ ಮನುಷ್ಯರನ್ನಾಗಿ ಮಾಡುತ್ತದೆ ಎಂದು ಮೋಹನ್ ಭಾಗವತ್ ಮತಾಂತರ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ