ಅಹಮದಾಬಾದ್: ಆರ್‌ಸಿಬಿ ತಂಡದ ರನ್ ಮೆಷಿನ್ ಎಂದು ಬಿರುದು ಪಡೆದುಕೊಂಡಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಈ ಬಾರಿ ಬೌಲರ್ ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಂಡದ ರನ್ ಮೆಷಿನ್ ಎಂದು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.
15ನೇ ಆವೃತ್ತಿ ಐಪಿಎಲ್‍ನಲ್ಲಿ ಸಿರಾಜ್ 15 ಪಂದ್ಯಗಳನ್ನು ಆಡಿ 10.7 ಎಕಾನಮಿಯಲ್ಲಿ 514 ರನ್ ಬಿಟ್ಟುಕೊಟ್ಟು ಕೇವಲ 9 ವಿಕೆಟ್ ಪಡೆದು ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಾರಿ ಪ್ಲೇ ಆಫ್ ಪ್ರವೇಶ ಪಡೆದಿದ್ದ ಆರ್‌ಸಿಬಿ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಪಡೆದಿದ್ದು ಅದೃಷ್ಟದಾಟದ ಮೂಲಕ ಸಿರಾಜ್ ಕಳಪೆ ಬೌಲಿಂಗ್ ಪ್ಲೇ ಆಫ್‌ನಲ್ಲೂ ಮುಂದುವರಿಸಿ ತಂಡದ ಸೋಲಿಗೆ ಕಾರಣರಾಗಿದ್ದಾರೆ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಈ ಸಲ ಕಪ್ ನಮ್ದೇ ಮುಂದಿನ ವರ್ಷಕ್ಕೆ – ಆರ್‌ಸಿಬಿಗೆ ಹೀನಾಯ ಸೋಲು – ರಾಯಲ್ ಆಗಿ ಫೈನಲ್‍ಗೆ ಎಂಟ್ರಿಕೊಟ್ಟ ಆರ್‌ಆರ್
ಈ ಬಾರಿಯ ಐಪಿಎಲ್‍ನಲ್ಲಿ ಬ್ಯಾಟಿಂಗ್‍ನಲ್ಲಿ ಸದ್ದು ಮಾಡದೇ ಸೈಲೆಂಟ್ ಆಗಿದ್ದ ವಿರಾಟ್ ಕೊಹ್ಲಿ ಬದಲು ಸಿರಾಜ್ ಬೌಲಿಂಗ್‍ನಲ್ಲಿ 500ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ರನ್ ಮೆಷಿನ್ ಆಗಿದ್ದಾರೆ ಎಂಬ ಹಲವು ಕಾಮೆಂಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಿರಾಜ್ ವಿರುದ್ಧವಾಗಿ ಹರಿದಾಡುತ್ತಿದೆ. ಇದನ್ನೂ ಓದಿ: ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ
the run machine the run machine
RCB needed this RCB got this
season. season.
Virat Kohli. Mohammed Siraj. pic.twitter.com/VQH0PKBjB3
— Akshat (@AkshatOM10) May 27, 2022
ಅಲ್ಲದೇ ಸಿರಾಜ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಒಟ್ಟು 31 ಸಿಕ್ಸ್ ಹೊಡೆಸಿಕೊಂಡು ಒಂದೇ ಸೀಸನ್‍ನಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಬೌಲರ್ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ. ಈ ಹಿಂದೆ ಚೆನ್ನೈ ತಂಡದ ಬ್ರಾವೋ 2018ರ ಒಂದೇ ಸೀಸನ್‍ನಲ್ಲಿ 16 ಪಂದ್ಯಗಳಿಂದ 29 ಸಿಕ್ಸ್ ಹೊಡೆಸಿಕೊಂಡಿದ್ದರು.