ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಶಮಿ ಕಾಲಿಗೆ ಶಸ್ತ್ರಚಿಕಿತ್ಸೆ – ಐಪಿಎಲ್‌ನಿಂದ ಹೊರಗೆ?

Public TV
1 Min Read
Mohammed Shami 1

ಬ್ರಿಟನ್‌: ಭಾರತ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್ ಶಮಿ (Mohammed Shami) 2024 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)ನಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಡ ಪಾದದ ಗಾಯದಿಂದ ಹೊರಗುಳಿದಿರುವ ಟೀಂ ಇಂಡಿಯಾ ಬೌಲರ್‌ ಸೋಮವಾರ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಧ್ರುವ್ ಜುರೆಲ್, ಗಿಲ್ ತಾಳ್ಮೆಯ ಜೊತೆಯಾಟ – ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತಕ್ಕೆ ಸರಣಿ ಜಯ

ಈ ಕುರಿತು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಶಮಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಆಸ್ಪತ್ರೆಯ ಬೆಡ್‌ನಲ್ಲಿರುವ ಶಮಿ, ನನ್ನ ಅಕಿಲ್ಸ್ ಸ್ನಾಯುರಜ್ಜು ಮೇಲೆ ಯಶಸ್ವಿ ಹೀಲ್ ಆಪರೇಷನ್ ಆಗಿದೆ. ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನನ್ನ ಪಾದಗಳು ಮೊದಲಿನಂತಾಗಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ನಡೆದ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶಮಿ ಮಿಂಚಿದ್ದರು. ಮುಂದಿನ ತಿಂಗಳಿಂದ ಐಪಿಎಲ್‌ ಪ್ರಾರಂಭವಾಗಲಿದ್ದು, ಗುಜರಾತ್ ಟೈಟಾನ್ಸ್ ವೇಗಿ ಆಟದಿಂದ ಹೊರಗುಳಿಯಬಹುದು ಎನ್ನಲಾಗಿದೆ. ಇದನ್ನೂ ಓದಿ: ಸಿಸಿಎಲ್ 2024: ಮುಂಬೈ ವಿರುದ್ಧ ಗೆದ್ದ ಸುದೀಪ್ ಟೀಮ್

ಡಿಸೆಂಬರ್-ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಶಮಿ ಆಯ್ಕೆಯಾಗಿದ್ದರು. ಪಾದದ ಗಾಯದ ಸಮಸ್ಯೆಯಿಂದ ಅವರು ಆಟದಿಂದ ಹೊರಗುಳಿಯಬೇಕಾಯಿತು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಗೆ ಅವರು ಭಾರತ ತಂಡದ ಭಾಗವಾಗಿಲ್ಲ. ಶಮಿ ಈಗ ಜೂನ್‌ನಲ್ಲಿ ನಡೆಯಲಿರುವ ಐಪಿಎಲ್ ಮತ್ತು 2024ರ ಐಸಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ.

Share This Article