ಮುಂಬೈ: ಆಸ್ಟ್ರೇಲಿಯಾ (Australia) ವಿರುದ್ಧದ ತವರಿನ ಟಿ20 ಸರಣಿ (T20I Series) ಆರಂಭಕ್ಕೂ ಮುನ್ನ ಭಾರತಕ್ಕೆ (India) ಶಾಕ್ ಎದುರಾಗಿದೆ. ಟಿ20 ಸರಣಿಗೆ ಆಯ್ಕೆ ಆಗಿದ್ದ ವೇಗಿ ಮೊಹಮ್ಮದ್ ಶಮಿಗೆ (Mohammed Shami) ಕೊರೊನಾ (Corona) ಪಾಸಿಟಿವ್ ಕಂಡುಬಂದ ಕಾರಣ ಸರಣಿಯಿಂದ ಹೊರ ನಡೆದಿದ್ದಾರೆ.
Advertisement
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಸೆ.20 ರಿಂದ ಆರಂಭವಾಗಲಿದ್ದು, ಈಗಾಗಲೇ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಶಮಿಗೆ ಪಾಸಿಟಿವ್ ವರದಿಯಾಗಿದೆ. ಬಳಿಕ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಿದ್ದು, ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿಯಲಿದ್ದಾರೆ. ಮುಂದಿನ ದಕ್ಷಿಣ ಆಫ್ರಿಕಾ ಸರಣಿ ವೇಳೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದ ಕೆಲಸ ಮಾಡ್ಬೇಡಿ- ಗಂಭೀರ್ ಗರಂ
Advertisement
Advertisement
ಶಮಿ ತಂಡದಿಂದ ಹೊರನಡೆದಿರುವುದರಿಂದ ಅವರ ಸ್ಥಾನಕ್ಕೆ ಉಮೇಶ್ ಯಾದವ್ (Umesh Yadav) ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ 3 ವರ್ಷಗಳ ಬಳಿಕ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿದಂತಾಗಿದೆ. ಉಮೇಶ್ ಯಾದವ್ 2019ರಲ್ಲಿ ಕೊನೆಯದಾಗಿ ಭಾರತ ಪರವಾಗಿ ಟಿ20 ಪಂದ್ಯವಾಡಿದ್ದರು ಬಳಿಕ ಟಿ20 ತಂಡದಿಂದ ಡ್ರಾಪ್ ಆಗಿದ್ದ ಉಮೇಶ್ ಯಾದವ್ 2022ರ ಐಪಿಎಲ್‍ನಲ್ಲಿ (IPL) ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದನ್ನೂ ಓದಿ: ಮಹತ್ತರವಾದ ಕಾರಣಕ್ಕಾಗಿ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿದ ಲೆಜೆಂಡ್ ಕ್ರಿಕೆಟಿಗರು
Advertisement
ಇದೀಗ ಶಮಿ ಬದಲಿಗೆ ಯಾದವ್ ಕಡೆ ಆಯ್ಕೆ ಸಮಿತಿ ಒಲವು ತೋರಿದ್ದು, ಯಾದವ್ ಕೌಂಟಿ ಕ್ರಿಕೆಟ್‍ನಲ್ಲೂ ಗಮನಾರ್ಹ ಬೌಲಿಂಗ್ ಪ್ರದರ್ಶಿಸಿದ್ದರು. ಹಾಗಾಗಿ ಮತ್ತೊಮ್ಮೆ ಟಿ20 ತಂಡಕ್ಕೆ ಯಾದವ್ ಆಯ್ಕೆ ಅಚ್ಚರಿ ಪಡಬೇಕಾಗಿಲ್ಲ.