ಮುಂಬೈ: ಗಡಿಯಾಚೆಗಿರುವ ಪಾಕಿಸ್ತಾನದ (Pakistan) ಕೆಲ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ತಿರುಗೇಟು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ, ನನ್ನಂತೆಯೇ ಪ್ರದರ್ಶನ ನೀಡುವ ಇನ್ನೂ 10 ಬೌಲರ್‌ಗಳು ಹುಟ್ಟಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಾರ ಬಗ್ಗೆಯೂ ಅಸೂಯೆ ಪಡುವುದಿಲ್ಲ. ನೀವು ಬೇರೆಯವರ ಯಶಸನ್ನು ಆನಂದಿಸಿದ್ರೆ, ಉತ್ತಮ ಆಟಗಾರರಾಗುತ್ತೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್ ಬಾಲ್ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಟೀಕೆ
Advertisement
Advertisement
ಕೆಲವರು ಅನಗತ್ಯ ವಿವಾದಗಳನ್ನ ಸೃಷ್ಟಿಸುತ್ತಿದ್ದಾರೆ. ಬೇರೆ ಬೇರೆ ಚೆಂಡುಗಳನ್ನು (Different Ball) ಪಡೆಯುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ಬಹಳಷ್ಟು ಕೇಳುತ್ತಿದ್ದೇನೆ. ಆರಂಭಿಕ ಪಂದ್ಯಗಳಲ್ಲಿ ಪ್ಲೇಯಿಂಗ್-11 ಭಾಗವಾಗಿರಲಿಲ್ಲ. ನನ್ನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡ ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದೆ, ಮುಂದಿನ 2 ಪಂದ್ಯಗಳಲ್ಲಿ ಕ್ರಮವಾಗಿ 4 ಮತ್ತು 5 ವಿಕೆಟ್ ಪಡೆದೆ. ಹಾಗಾಗಿ ಪಾಕಿಸ್ತಾನದ ಕೆಲ ಆಟಗಾರರು ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಪ್ರಕಾರ ಹೇಳುವುದಾದ್ರೇ ಸರಿಯಾದ ಸಮಯಕ್ಕೆ ಸೂಕ್ತ ಪ್ರದರ್ಶನ ನೀಡುವವರೇ ಉತ್ತಮ ಆಟಗಾರ ಎಂದು ನುಡಿದಿದ್ದಾರೆ.
Advertisement
Advertisement
ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಹಾರ್ದಿಕ್ ಪಾಂಡ್ಯ (Hardik Pandya) ಅವರಿಂದಾಗಿ ಮೊದಲ 4 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದ್ರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲಿಗೆ ಪೆಟ್ಟಾಗಿಸಿಕೊಂಡ ಪರಿಣಾಮ ವಿಶ್ವಕಪ್‌ನಿಂದಲೇ (World Cup 2023) ಪಾಂಡ್ಯ ಹೊರಗುಳಿಯಬೇಕಾಯಿತು. ಹಾಗಾಗಿ ಶಮಿ ಹಾರ್ದಿಕ್ ಪಾಂಡ್ಯ ಬದಲಿಗೆ ತಂಡದಲ್ಲಿ ಸೇರ್ಪಡೆಯಾದರು. ಆ ನಂತರ ಮುಂದಿನ 7 ಪಂದ್ಯಗಳನ್ನಾಡಿದ ಮೊಹಮ್ಮದ್ ಶಮಿ ಬರೋಬ್ಬರಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಶ್ರೇಷ್ಠ ಸಾಧನೆ ಮಾಡಿದರು. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್ ಬಗ್ಗೆ ಅಖಿಲೇಶ್ ಟೀಕೆ
ದಿಗ್ಗಜರ ಎಲೈಟ್ ಪಟ್ಟಿ ಸೇರಿದ ಶಮಿ:
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ 50ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟಾಪ್-5 ದಿಗ್ಗಜರ ಎಲೈಟ್ ಪಟ್ಟಿ ಸೇರಿಕೊಂಡರು. 39 ವಿಶ್ವಕಪ್ ಪಂದ್ಯಗಳನ್ನಾಡಿರುವ ಆಸೀಸ್ ಬೌಲಿಂಗ್ ದಿಗ್ಗಜ ಗ್ಲೇನ್ ಮೆಕ್‌ಗ್ರಾತ್ 71 ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೇ, ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ (40 ಮ್ಯಾಚ್, 68 ವಿಕೆಟ್), ಆಸೀಸ್‌ನ ಮಿಚೆಲ್ ಸ್ಟಾರ್ಕ್ (28 ಮ್ಯಾಚ್, 65 ವಿಕೆಟ್), ಶ್ರೀಲಂಕಾದ ಮಾಲಿಂಗ (29 ಮ್ಯಾಚ್, 56 ವಿಕೆಟ್) ಪಡೆದು ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿದ್ದಾರೆ. ಕೇವಲ 18 ಪಂದ್ಯಗಳಲ್ಲಿ 55 ವಿಕೆಟ್‌ಗಳನ್ನು ಪಡೆದಿರುವ ಶಮಿ 5ನೇ ಸ್ಥಾನದಲ್ಲಿದ್ದಾರೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 57 ರನ್‌ಗಳಿಗೆ 7 ವಿಕೆಟ್ ಪಡೆದಿರುವುದು ಶಮಿಯ ಶ್ರೇಷ್ಠ ಪ್ರದರ್ಶನವಾಗಿದೆ.
ಹಸನ್ ರಾಝಾ ಹೇಳಿದ್ದೇನು?
ಪಾಕ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದ ವಿಶ್ವಕಪ್ ಟೂರ್ನಿಯ ಕುರಿತು ಮಾತುಕತೆ ನಡೆಯುತ್ತಿತ್ತು. ವಾಸಿಂ ಅಕ್ರಮ್, ಶೋಯೆಬ್ ಮಲಿಕ್, ಮಿಸ್ಬಾ ಉಲ್ ಹಕ್ ಮೊದಲಾದವರು ಪಾಕ್ ತಂಡದ ಕಳಪೆ ಪ್ರದರ್ಶನ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದರು. ಆಗ ಹಸನ್ ರಾಝಾ ಟೀಂ ಇಂಡಿಯಾ ಬೌಲಿಂಗ್ (Team India Bowling) ಮತ್ತು ಡಿಆರ್‌ಎಸ್ ನಿರ್ಧಾರಗಳ ಕುರಿತು ಟೀಕಿಸಿದ್ದರು.
ಶ್ರೀಲಂಕಾ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ, ಟೀಂ ಇಂಡಿಯಾ ಬೌಲಿಂಗ್ ವೇಳೆ ಚೆಂಡುಗಳು ಹೆಚ್ಚಾಗಿ ಸ್ವಿಂಗ್ ಆಗುತ್ತಿವೆ. ಒಂದು ವೇಳೆ ಅವರಿಗೆ ವಿಶೇಷ ಚೆಂಡುಗಳನ್ನು (Speical Ball) ನೀಡುತ್ತಿದ್ದಾರೆ ಅಂತ ನಿಮಗೆ ಅನ್ನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್, ಟೀಂ ಇಂಡಿಯಾ ಬೌಲರ್‌ಗಳ ಸ್ವಿಂಗ್ ಗಮನಿಸಿದ್ರೆ ಖಂಡಿತಾ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?